Advertisement

ಗೋರೆಗಾಂವ್‌ ಕರ್ನಾಟಕ ಸಂಘ: ಗುರುಪೂರ್ಣಿಮೆ ಆಚರಣೆ

03:35 PM Aug 10, 2018 | Team Udayavani |

ಮುಂಬಯಿ: ಹಿಂದಿನ ಕಾಲದಲ್ಲಿ ಎಂಟು ವರ್ಷಕ್ಕೆ ಮಕ್ಕಳು ಗುರುಕುಲವನ್ನು ಸೇರುತ್ತಿದ್ದರು. ತಂದೆ- ತಾಯಿಯಗಳ ಜೊತೆಗೆ ಗುರುವನ್ನು ಕೂಡಾ ದೇವರೆಂದು ಪೂಜಿಸುತ್ತಿದ್ದರು. ಗುರುವಾಕ್ಯ ಅಂದರೆ ವೇದವಾಕ್ಯ ಎಂದು ಭಾವಿಸುವ ಕಾಲವೊಂದಿತ್ತು. ಆದರೆ ಇಂದಿನ ಕಾಲದಲ್ಲಿ ಗುರುವಿನ ಮಹತ್ವ ಕಡಿಮೆಯಾಗುತ್ತಾ ಹೋಗು ತ್ತಿದೆ. ಇಂದು ಶಿಷ್ಯರ ಮನಸ್ಸನ್ನು ಅರಿತು ಅದರ ಪ್ರಕಾರ ಗುರುವು ನಡೆಯಬೇಕಾಗುತ್ತದೆ ಎಂದು ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಗೋರೆಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಇತ್ತೀಚೆಗೆ ಸಂಘದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಟ್ಟಿನಲ್ಲಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಗುರುವಿನ ಘನತೆ ಕುಗ್ಗುತ್ತಿದೆ. ಗೋರೆಗಾಂವ್‌ ಕರ್ನಾಟಕ ಸಂಘವು ಸದಾ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಉಪ ಕಾರ್ಯಾಧ್ಯಕ್ಷೆ ಉಷಾ ಎಸ್‌. ಶೆಟ್ಟಿ ಮತ್ತು ಶಾಂತಾ ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್‌ ನಾಯಕ್‌ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ವಿಭಾಗದ ಸಿದ್ಧಿ-ಸಾಧನೆಗಳನ್ನು ವಿವ ರಿಸಿದರು. ಮುಖ್ಯ ಅತಿಥಿ ಲಕ್ಷ್ಮೀ ವಿ. ಶೆಟ್ಟಿ ಅವರನ್ನು ಪದ್ಮಾವತಿ ಶೆಟ್ಟಿ ಅವರು ಪರಿಚಯಿಸಿದರು. ದೇವಲ್ಕುಂದ ಭಾಸ್ಕರ ಶೆಟ್ಟಿ ಮತ್ತು ಸರಿತಾ ಸುರೇಶ್‌ ನಾಯಕ್‌ ಅವರು ಅತಿಥಿಗಳನ್ನು  ಗೌರವಿಸಿದರು.

ಮುಖ್ಯ ಅತಿಥಿ ಲಕ್ಷ್ಮೀ ವಿ. ಶೆಟ್ಟಿ ಇವರು ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ ವಾಗಿರುವ ಗುರುಪೂರ್ಣಿಮೆ ನಮಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೆ ಕೃತಜ್ಞತೆಯನ್ನು ತೋರುವ ಒಂದು ಪಾವನ ಪರ್ವವಾಗಿದೆ. ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕಾಗಿ ಅವರು ಗೋರೆಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗವನ್ನು ಅಭಿನಂದಿಸಿದರು.

ವಿಶೇಷ ಉಪನ್ಯಾಸ ನೀಡಿದ ಶಶಿಕಲಾ ಕೋಟೆಕಾರ್‌ ಅವರನ್ನು ಯಶೋಧಾ ಶೆಟ್ಟಿ ಪರಿಚಯಿಸಿದರು. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಶಶಿಕಲಾ ಕೋಟೆಕಾರ್‌ ಅವರು ಮಾತನಾಡಿ, ಗುರುವೆಂದರೆ ಶ್ರೇಷ್ಠ
ನಾದವನು- ದೊಡ್ಡವನು. ಗುರುಪೂರ್ಣಿಮೆ ಸನಾತನ ಭಾರತೀಯ ಸಂಸ್ಕೃತಿಯ ಒಂದು ಮಹತ್ವದ ಆಚರಣೆಯಾಗಿದೆ. ಒಂದು ಮಣ್ಣಿನ ಮುದ್ದೆಯಂತಿದ್ದ ಮನುಷ್ಯ ಗುರುವಿನಿಂದ ಕಲಿತ ಮೇಲೆ ಪರಿಪೂರ್ಣ ಮನುಷ್ಯ ನಾಗುತ್ತಾನೆ. ಗುರು ತನ್ನ ಶಿಷ್ಯರಲ್ಲಿ ಅರಿವು, ಕಲ್ಪನೆ, ವಿವೇಚನೆ, ಜಿಜ್ಞಾಸೆ ಮೊದಲಾದವುಗಳನ್ನು ಜಾಗೃತಗೊಳಿಸುತ್ತಾನೆ.

Advertisement

ವೇದಗಳ ಕಾಲದಲ್ಲಿ ಇದ್ದ ಋಷಿಮುನಿಗಳು, ತ್ರೇತಾಯುಗದ ವಾಲ್ಮೀಕಿ, ದ್ವಾಪರಯುಗದ ವೇದವ್ಯಾಸ, ಸಪ್ತ ಋಷಿಗಳು, ಇತಿಹಾಸದಲ್ಲಿ ಮುಖ್ಯವಾಗಿ ಸ್ವಾಮಿ ವಿವೇಕಾನಂದ, ಶಂಕರಾಚಾರ್ಯ, ರವೀಂದ್ರನಾಥ್‌ ಠಾಗೋರ್‌, ಇನ್ನಿತರ ಸಾಧು ಸಂತರ ಮಹತ್ವವನ್ನು ಅವರು ಸುಂದರವಾಗಿ ವಿವರಿಸಿ, ವಿಶ್ವಮಾನ್ಯವಾದ ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣನು ಜಗತ್ತಿಗೆ ಗುರುವೆನಿಸಿದ್ದಾರೆ.

ಇದಲ್ಲದೆ ವಿಜ್ಞಾನ ಆಯುರ್ವೇದ, ಶಲ್ಯ ಚಿಕಿತ್ಸೆ ಹೀಗೆ ಹಲವು ಕ್ಷೇತ್ರದಲ್ಲಿ ನಮ್ಮ ಭಾರತೀಯರು ಹೆಸರು ಗಳಿಸಿದ್ದು, ಅವರು ಇಡೀ ಜಗತ್ತಿಗೆ ಗುರುವಿನ ಸ್ಥಾನದಲ್ಲಿದ್ದಾರೆ ಎಂದು ನುಡಿದರು. ಸಂಚಾಲಕಿ ಇಂದಿರಾ ಮೊಲಿ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕಿ ಉಷಾ ಪಿ. ಸುವರ್ಣ ವಂದಿಸಿದರು. ಸಂಘ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ವಿವಿಧ ವಿಭಾಗಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next