Advertisement

ಗೋರೆಗಾಂವ್‌ ಕರ್ನಾಟಕ ಸಂಘ ಸಂಸ್ಥಾಪನಾ ದಿನಾಚರಣೆ, ಪ್ರಶಸ್ತಿ ಪ್ರದಾನ

04:50 PM Nov 07, 2018 | Team Udayavani |

 ಮುಂಬಯಿ: ವಜ್ರ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರ ಪ್ರತಿಷ್ಠಿತ ಗೋರೆಗಾಂವ್‌ ಕರ್ನಾಟಕ ಸಂಘದ 61ನೇ ಸಂಸ್ಥಾಪನಾ ದಿನಾಚರಣೆಯು ಅ. 22 ರಂದು ಸಂಜೆ ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಮೆಮೋರಿಯಲ್‌ ಮಿನಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ  ಸಂಘದ ಹಿರಿಯ ರಾದ ದಿ|ಡಾ| ಸುನೀತಿ ಉದ್ಯಾವರ ಅವರು ಸಂಘದ ಬಗ್ಗೆ ಬರೆದ ಕವನವನ್ನು ಸೀಮಾ ಕುಲಕರ್ಣಿ ಮತ್ತು ವೇದಾ ಸುವರ್ಣ ಅವರು ಪ್ರಸ್ತುತಪಡಿಸುವುದರ ಮೂಲಕ ಚಾಲನೆ ನೀಡಲಾಯಿತು.

ಸಂಘದ ಮಾಜಿ ಅಧ್ಯಕ್ಷರಾದ ಎಸ್‌.ಎಂ. ಶೆಟ್ಟಿ, ಜಿ.ಟಿ. ಆಚಾರ್ಯ, ಶಕುಂತಳಾ ಪ್ರಭು, ರಮೇಶ್‌ ಶೆಟ್ಟಿ ಪಯ್ನಾರು, ಪ್ರಸ್ತುತ ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಅಧ್ಯಕ್ಷರು  ಸಂದಭೋìಚಿತವಾಗಿ ಮಾತ ನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಎ. ಎಸ್‌. ನಾವಡ ಯಕ್ಷಗಾನ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಟಿ. ಆರ್‌. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಜಿ.ಟಿ. ಆಚಾರ್ಯ ಅವರು ಪ್ರಶಸ್ತಿ ಪುರಸ್ಕೃತ ಟಿ.ಆರ್‌. ಶೆಟ್ಟಿ ಅವರ ಅಭಿನಂದನ ಭಾಷಣಗೈದರು. ಸಂಘದ ಜತೆ ಕಾರ್ಯದರ್ಶಿ ವಸಂತಿ ಕೋಟೆಕಾರ್‌ ಸಮ್ಮಾನ ಪತ್ರ ವಾಚಿಸಿದರು.

ಪ್ರಶಸ್ತಿ ಸ್ವೀಕೃತ ಟಿ.ಆರ್‌. ಶೆಟ್ಟಿ ಅವರು ಮಾತನಾಡಿ, ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಸಂಘದಲ್ಲಿ ಮಹಿಳೆಯರ ಕಾರ್ಯಕಲಾಪದ ಶಕ್ತಿಯನ್ನು ಬಹಳಷ್ಟು ಕೇಳಿದ್ದರು, ಓದಿದ್ದರೂ ಇಂದು ಪ್ರತ್ಯಕ್ಷವಾಗಿ ನೋಡಿ ಹೆಮ್ಮೆ ಪಡುವಂತಾಗಿದೆ. ಈ ಪ್ರಶಸ್ತಿಯನ್ನಿತ್ತು ಗೌರವಿಸಿದ ಸಂಘಕ್ಕೆ ಹಾಗೂ ಸದಸ್ಯರಿಗೆ ಋಣಿಯಾಗಿದ್ದೇನೆ ಎಂದರು.

Advertisement

ಅಧ್ಯಕ್ಷ ದೇವಲ್ಕುಂದ ಭಾಸ್ಕರ್‌ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಕಟ್ಟಿ ಬೆಳೆಸಿದ ಹಿರಿಯರ ಶ್ರಮ, ಶ್ರದ್ಧೆ, ಏಕತೆಯ ಸೇವೆಯನ್ನು ಮರೆ ಯುವಂತಿಲ್ಲ. ಅವರು ನೀಡಿದ ಮಾರ್ಗದರ್ಶದಲ್ಲಿ ಸಂಘವು ಇಂದಿಗೂ ಸಾಗುತ್ತಿದೆ. ಇಲ್ಲಿ ಎಲ್ಲರು ಒಂದೇ ಎಂಬ ಭಾವನೆಯಿದೆ. ಮಾಜಿ ಅಧ್ಯಕ್ಷರು, ಸದಸ್ಯರ ಸೇವೆಯನ್ನು ಮರೆ ಯುವಂತಿಲ್ಲ. ಅವರ ಸಾಮರ್ಥ್ಯದ ಫಲದಿಂದ ಸಂಘವು ಇಂದು ವಜ್ರಮಹೋತ್ಸವವನ್ನು ಆಚರಿಸುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಟಿ. ಆರ್‌. ಶೆಟ್ಟಿ ಅವರಂತಹ ಓರ್ವ ಹಿರಿಯ ಕಲಾವಿದರಿಗೆ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ಹಾರೈಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಡಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ನಾಲ್ಕು ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಂಘದ ಹಿತೈಷಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕ ಗುಣೋದಯ ಐಲ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next