Advertisement
ಒಂದೆರಡು ಗಂಟೆ ನದಿ, ತೊರೆಗಳಲ್ಲಿ ಸತತವಾಗಿ ಈಜಲು ಸಾಧ್ಯವಾಗದು. ಇನ್ನು ಸಮುದ್ರದಲ್ಲಿ ಸಾಧ್ಯವೆ? ಆದರೆ ಕ್ಯಾರ್ ಚಂಡ ಮಾರುತದ ಹೊಡೆತದ ನಡುವೆಯೂ ಲೊಂಡ ಗೊರಯ್ಯ ಬದುಕಲೇ ಬೇಕು ಎಂಬ ಹಠದಿಂದ ನೆರವಿವಾಗಿ ಎದುರು ನೋಡುತ್ತಲೇ ಇದ್ದರು. ಕೊನೆಗೂ ಕೋಸ್ಟ್‌ಗಾರ್ಡ್‌ನ ಹಡಗೊಂದು ಹತ್ತಿರದಲ್ಲಿ ಬರುತ್ತಿದ್ದಂತೆ ನೆರವಿವಾಗಿ ಕೂಗಿಕೊಂಡು ಹೇಗೂ ಬದುಕಿ ಬಂದರು. ಸತತ 12 ಗಂಟೆ ಸಮುದ್ರದಲ್ಲಿ ಈಜಾಡಿ ಬದುಕುಳಿದ ಈತನ ಚಾಕಚಾಕ್ಯತೆಯ ಬಗ್ಗೆ ಕೋಸ್ಟ್ ಗಾರ್ಡ್ ಅ ಧಿಕಾರಿಗಳೂ ಆಶ್ಚರ್ಯ, ಸಂತಸ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದದ್ದು ಅ. 23ರಂದು ತೊಕ್ಕೊಟಿನ ಕಿರಣ್ ಡಿ’ಸೋಜಾ ಅವರ ಶೈನಾಲ್ ಏಂಜಲ್ ಮೀನುಗಾರಿಕಾ ದೋಣಿಯಲ್ಲಿ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ಬೆಳ್ಳಂಬೆಳಗ್ಗೆ ಸಹವರ್ತಿ ಕಾರ್ಮಿಕರೊಂದಿಗೆ ಹೊರಟಿದ್ದ ಅದು ಬೆಳಗಿನ ಜಾವ 3 ಗಂಟೆ. ದೋಣಿಯಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ಆದರೆ ಇದಕ್ಕಿದ್ದಂತೆ ಮೊಲ್ ದೋಣಿಯಲ್ಲೇ ಇದ್ದರೂ ಗೊರಯ್ಯ ಕಾಣದಂತಾದ. ತತ್‌ಕ್ಷಣ ದೋಣಿಯಲ್ಲಿದ್ದವರು ಈತನನ್ನು ದೋಣಿಯ ಒಳಗೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅನಾಹುತ ಆಗಿಹೋಗಿದೆ ಎಂದು ಅರಿವಾದದ್ದೇ ತಡ ದೋಣಿಯನ್ನು ಹಿಂದಿರುಗಿಸಿ ಬಂದ ದಾರಿಯಲ್ಲಿ ಹುಡುಕಲಾರಂಭಿ ಸಿದರು. ಆದರೆ ಈತನ ಸುಳಿವು ಪತ್ತೆಯಾಗದೆ ಇದ್ದಾಗ, ಕಿರಣ್ ಡಿ’ಸೋಜಾಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮೀನುಗಾರ ಗೊರಯ್ಯ ನಾಪತ್ತೆಯಾದ ಸುದ್ದಿಯನ್ನು ಕೋಸ್ಟ್‌ಗಾರ್ಡ್‌ಗೆ ತಿಳಿಸಲಾಯಿತು. ಸಮುದ್ರದಲ್ಲಿ ಕಣ್ಗಾವಲು ನಿರತವಾಗಿದ್ದ ಸಾವಿತ್ರಿ ಬಾೖ ಫುಲೆ ಕೋಸ್ಟ್‌ಗಾರ್ಡ್ ಹಡಗು ಕಾರ್ಯಾಚರಣೆಗೆ ಇಳಿಯಿತು. ಮಲ್ಪೆ ಲೈಟ್ ಹೌಸ್‌ನಿಂದ 10 ನಾಟಿಕಲ್ ಮೈಲು ದೂರದಲ್ಲಿ ಸಂಜೆ 3 ಗಂಟೆಗೆ ಈತನನ್ನು ಪತ್ತೆ ಹಚ್ಚಿ ರಕ್ಷಿಸಲಾಯಿತು. ಕ್ಯಾರ್‌ಚಂಡ ಮಾರುತದ ನಡುವೆ ಸಮುದ್ರದ ಹತ್ತಿರದಿಂದಲೂ ಏನೂ ಕಾಣದಂತ ಸ್ಥಿತಿ. ಆದರೂ ಸಾವಿತ್ರಿ ಬಾಯಿ ಫುಲೆ ಹಡಗಿನ ಕಮಾಂಡೆಂಟ್ ಭವಾನಿ ದತ್ ಅವರ ನೇತೃತ್ವದ ಕೋಸ್ಟ್‌ಗಾರ್ಡ್ ಸಿಬಂದಿ ಸಾಹಸಮಯವಾಗಿ ಈತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಸಾವಿತ್ರಿ ಬಾೖ ಫುಲೆ ಕಮಾಂಡೆಂಟ್ ಭವಾನಿ ದತ್ ಅವರು ಕಾರ್ಯಾಚರಣೆ ಮಾಹಿತಿ ನೀಡಿ ಗೊರಯ್ಯ ಅವರನ್ನು ಪತ್ತೆ ಹಚ್ಚಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದರು. ಕೋಸ್ಟ್‌ಗಾರ್ಡ್‌ನ ಕ್ಯಾರ್ ಚಂಡ ಮಾರುತದ ಸಂದರ್ಭದ ಕಾರ್ಯಚರಣೆ ಇದೀಗ ಸರ್ವತ್ರ ಶ್ಲಾಘನೆಗೆ ಪಾತ್ರವಾಗುತ್ತಿದೆ.
Related Articles
ಕಿರಣ್ ಡಿ’ಸೋಜಾ ಕೋಸ್ಟ್ ಗಾರ್ಡ್ ಅಧಿಕಾರಿಗಳ ನೆರವನ್ನು ಶ್ಲಾಘಿಸಿರುವುದಲ್ಲದೆ, ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು. ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿಯಲ್ಲಿಯೂ ಇವರ ಕಾರ್ಯ ಚಣೆಯಿಂದಾಗಿ ಒಂದು ಜೀವವನ್ನು ಉಳಿಸಿಕೊಂಡಿದ್ದೇವೆ. ಆತ ತನ್ನ ಮನೆಯಲ್ಲಿ ದೀಪಾವಳಿ ಆಚರಿಸಿಕೊಂಡಿದ್ದಾರೆ ಎಂದು ಹೃದಯ ತುಂಬಿ ನುಡಿದರು.
Advertisement