Advertisement

ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಪಡೆದ ಇನ್ಫೋಸಿಸ್ ಸುಧಾಮೂರ್ತಿ!

09:30 PM Sep 24, 2021 | Team Udayavani |

ಕೊರಟಗೆರೆ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾಪನ ಅಧ್ಯಕ್ಷರಾದ ಸುಧಾಮೂರ್ತಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಮುಂಜಾನೆ 7.30 ದೇವಸ್ಥಾನಕ್ಕೆ ಆಗಮಿಸಿದ ಸುಧಾಮೂರ್ತಿ ರವರಿಗೆ ಟ್ರಸ್ಟ್ ನವರು ಕುಂಭ ಮೇಳದ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡು, ತಂದಂತಹ ಪೂಜಾ ಸಾಮಗ್ರಿ ಗಳಿಂದ ಶ್ರೀ ಮಾತೆಗೆ ಸಿಂಗರಿಸಿ ವಿಶೇಷ ಪೂಜೆ ಜರುಗಿಸಿದರು.

ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದಲೂ ಧಾರ್ಮಿಕ ಕ್ಷೇತ್ರಗಳು ಕಳೆಗುಂದುತ್ತಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಕೋವಿಡ್ ನಿಯಮಾವಳಿಗಳನ್ನು ಜನರು ಪಾಲಿಸಬೇಕು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾತ್ರವೂ ಬಹು ಮುಖ್ಯವಾಗಿರುತ್ತದೆ, ಮಾನವನ ಜಂಜಾಟದ ಜೀವನದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಚಟುವಟಿಕೆಗಳಿಂದ ಮಾತ್ರ ನೆಮ್ಮದಿ ಹೊಂದಲು ಸಾಧ್ಯ ಎಂದರಲ್ಲದೆ ಈ ಹಿಂದಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಗತವೈಭವವನ್ನು ಮರುಕಳಿಸುವಂತಹ ಕೆಲಸ ಈ ಟ್ರಸ್ಟ್ ನಿಂದ ಆಗಲಿ ಎಂದು ನೂತನ ಟ್ರಸ್ಟ್ ಗೆ ಶುಭ ಹಾರೈಸಿದರು.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ; ಕಾಂಗ್ರೆಸ್ ವಿರುದ್ಧ ಡಾ.ಅಶ್ವತ್ಥನಾರಾಯಣ ಕಿಡಿ

ಲಕ್ಷ್ಮಿ ಕ್ಷೇತ್ರದಲ್ಲಿ ಶಾರದೆಗೆ ಹೆಚ್ಚು ಒತ್ತು ಕೊಡಿ
ಸುಧಾಮೂರ್ತಿಯವರು ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಾಲಯಕ್ಕೆ ಭೇಟಿ ನೀಡಿ ಟ್ರಸ್ಟ್ ನ ಪದಾಧಿಕಾರಿಗಳಿಗೆ ಶಿಕ್ಷಣಕ್ಕೆ ಒತ್ತು ಕೊಡಿ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ ಲಕ್ಷ್ಮಿ ಕ್ಷೇತ್ರದಲ್ಲಿ ಶಾರದೆಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಮೂಲಕ ಸಮಾಜ ಸುಧಾರಣೆ ಮಾಡಿ ಎಂದು ಕಿವಿಮಾತು ಹೇಳಿದರು.

Advertisement

ನೂತನ ಭೋಜನಾಲಯ ವೀಕ್ಷಿಸಿದ ಸುಧಾ ಮೂರ್ತಿ
ಇನ್ಫೋಸಿಸ್ ಪ್ರತಿಷ್ಠಾಪನ ಅಧ್ಯಕ್ಷರಾದ ಸುಧಾಮೂರ್ತಿಯವರು ಟ್ರಸ್ಟ್ ನ ಅಧ್ಯಕ್ಷರು ಸೇರಿದಂತೆ ಧರ್ಮದರ್ಶಿಗಳೊಂದಿಗೆ ನೂತನ ದಾಸೋಹವನ್ನು ವೀಕ್ಷಿಸಿ, ಧರ್ಮಸ್ಥಳದ ಮಾದರಿಯಲ್ಲಿ ದಾಸೋಹ ಕಟ್ಟಡ ನಿರ್ಮಿಸಿರುವುದು ಬಹಳ ಸೊಗಸಾಗಿದೆ, ವ್ಯವಸ್ಥಿತವಾಗಿದೆ ಕಾರ್ಯನಿರ್ವಹಿಸಿ ಎಂದರು,

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ವಾಸುದೇವ್ ಕಾರ್ಯದರ್ಶಿ ನರಸಯ್ಯ ಖಜಾಂಚಿ ಮಂಜುನಾಥ್ ಪ್ರಧಾನ ಅರ್ಚಕರಾದ ಪ್ರಸನ್ನಕುಮಾರ್ ಧರ್ಮದರ್ಶಿಗಳಾದ ಲಕ್ಷ್ಮಿಕಾಂತ್ ,ನಟರಾಜ್, ಶ್ರೀ ಪ್ರಸಾದ್ ,ರವಿರಾಜ್ ಅರಸ್ ,ಮುರಳಿ ಕೃಷ್ಣ, ಓಂಕಾರೇಶ್ವ ,ಜಗದೀಶ್, ರಾಮಲಿಂಗಯ್ಯ, ನರಸರಾಜು ,ಲಕ್ಷ್ಮೀನರಸಯ್ಯ ,ನಾಗರಾಜು ,ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ , ಮಾಜಿ ಕಾರ್ಯನಿರ್ವಹಣಾಧಿಕಾರಿ ಡಿ ಎನ್ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next