Advertisement

Goravanahalli; ಶ್ರೀಮಹಾಲಕ್ಷ್ಮೀ ಬೆಳ್ಳಿ ರಥೋತ್ಸವಕ್ಕೆ ಹನುಮಂತನಾಥ ಸ್ವಾಮೀಜಿ ಚಾಲನೆ

07:57 PM Dec 08, 2023 | Team Udayavani |

ಕೊರಟಗೆರೆ:  ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರವಾದ ಗೊರವನಹಳ್ಳಿ ಶ್ರೀ ಮಹಾಲಲಕ್ಷ್ಮೀ ಕ್ಷೇತ್ರದ ಅಧಿದೇವತೆ ಮಹಾಲಕ್ಷ್ಮೀ ಭಕ್ತರ ಇಷ್ಠಾರ್ಥ ನೇರವೇಸುತ್ತಿದ್ದು ಇದರೊಂದಿಗೆ ದೇವಾಲಯದ ಆಡಳಿತ ಮಂಡಳಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅನ್ನದಾನ, ವಿದ್ಯಾದಾನ ಮತ್ತು ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.

Advertisement

ಅವರು ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ಏರ್ಪಡಿಸಿದ್ದ ಬ್ರಹ್ಮರಥೋತ್ಸವ ಏಳೆಯುವ ಮೂಲಕ ಸಂಜೆ ನಡೆಯುವ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕೆ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಶ್ರೀ ಕ್ಷೇತ್ರವು ದೇಶದಲ್ಲಿಯೇ ಸುಪ್ರಸಿದ್ದವಾಗಿದ್ದು, ದೇವಾಲಯದ ಆಡಲಿತ ಮಂಡಳಿಯ ಜನಪರ ಸೇವೆಯಿಂದ ಶ್ರೀ ಕ್ಷೇತ್ರವು ಎತ್ತರಕ್ಕೆ ಬೆಳೆದಿದ್ದು, ಮಹಾಲಕ್ಷ್ಮೀಯ ಆಶ್ರೀರ್ವಾದ ದಿಂದ ನಡೆಯುತ್ತಿರುವ ಮಹಾಲಕ್ಷ್ಮೀ ಸೇವಾಟ್ರಸ್ಟ್ನ ಸೇವಾ ಕಾರ್ಯಕ್ರಮದ ಜತೆಯಲ್ಲಿ ಗ್ರಾಮೀಣ ಬಡ ಜನತೆಯ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾರ್ವಜನಿಕರ ಆರೋಗ್ಯ ಸೇವೆ ದೊರೆಯಲಿ ಎಂದರು.

ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಿಂದ ನಾಡಿನಲ್ಲಿ ಮಳೆಇ ಲ್ಲದೆ ತಲೆದೋರಿರುವ ಬರದ ಛಾಯೆಯನ್ನು ಹೋಗಲಾಡಿಸಿ ಸುಭಿಕ್ಷ ಮಳೆ-ಬೆಳೆ ಯಾಗುವಂತೆ ದೇವಿ ಆಶ್ರೀರ್ವದಿಸಲಿ ಎಂದು ಪ್ರಾರ್ಥಿಸಿದರು.

ಮಧುಗಿರಿ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾಮನಂದಜೀ ಮಹಾರಾಜ್ ಮಾತನಾಡಿ, ಮನುಷ್ಯನು ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನುಷ್ಯನಿಗೆ ಆರಿವು, ಆರೋಗ್ಯ ಮತ್ತು ಆಯುಷ್ಯ ವೃದ್ದಿಯಾಗುವುದರೊಂದಿಗೆ ಬೌತಿಕ ಬದುಕು ಸಂಪತ್ತಿನಷ್ಟೆ ಉಜ್ವಲಗೊಳುತ್ತದೆ, ಸಂಪತ್ತಿನ ಜತೆ ಜ್ಞಾನದ ಅರಿವಿನೋಂದಿಗೆ ಧಾರ್ಮಿಕ ಭಾವನೆಗಳನ್ನು ಸಂಪಾದಿಸಿಕೊಂಡು ಸಮಾಜದಲ್ಲಿ ಆದರ್ಶಗಳ ಪರಿಪಾಲನೆ ಮಾಡುವ ಮೂಲಕ ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಗೊರವನಹಳ್ಳಿ ಮಹಾಲಕ್ಷ್ಮೀ ಸೇವಾ ಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ್ ಮತ್ತು ಕಾರ್ಯದರ್ಶಿ ಆರ್.ಮುರಳೀಕೃಷ್ಣ ಮಾಹಿತಿ ನೀಡಿ ದೇವಲಯ ಟ್ರಸ್ಟ್ ಮತ್ತು ಭಕ್ತಾಧಿಗಳ ಸಹಕಾರೊಂದಿಗೆ ಇತ್ತೀಚೆಗೆ ೧೨ ಕೋಟಿ ರೂ ವೆಚ್ಚದಲ್ಲಿ ಸುಸರ್ಜಿತ ಮಹಾಲಕ್ಷ್ಮೀ ದಾಸೋಹ ಭವನ ನಿರ್ಮಿಸಿ ದೇವಾಲಯಕ್ಕೆ ಬರುವ ಭಕ್ತರಿಗೆ ಏಕಕಾಲದಲ್ಲಿ ೧ ಸಾವಿರ ಮಂದಿ ಭಕ್ತರಿಗೆ ಊಟ ನೀಡುವ ಸ್ಥಳಾವಕಾಶವಿರುವ ದಾಸೋಹ ಭವನ ಲೋಕಾರ್ಪಣೆ ಮಾಡಲಾಗಿದೆ ಹಾಗೂ ಭಕ್ತರ ಸಹಕಾರದಿಂದ ಮಹಾಲಕ್ಷ್ಮೀ ದೇವಿಯ ಗರ್ಭಗುಡಿಗೆ ಪಂಚಲೋಹದ ಚಿನ್ನದ ಲೇಪನ ಮತ್ತು ಗೋಪುರಕ್ಕೆ ಚಿನ್ನದ ಕಲಶ ಪ್ರತಿಷ್ಠಾಪಿಸಲಾಗಿದೆ, ದೇವಾಲಯದ ಸುತ್ತಲೂ ಸಿಸಿ ರಸ್ತೆ, ಹೈಟೆಕ್ ಶೌಚಾಲಯ ನಿಮಾರ್ಣ, ಭಕ್ತರ ಸುರಕ್ಷತೆಗಾಗಿ ದಿನದ ೨೪ ಗಂಟೆಗಳೂ ಸಿಸಿ ಟಿವಿ ಕ್ಯಾಮರಾಗಳು ಆಳವಡಿ ಸಲಾಗಿದೆ ಇದರೊಂದಿಗೆ ಸುತ್ತಮುತ್ತ ರೈತ ಕುಟುಂಬಗಳ ಮಕ್ಕಳ ಶೈಕ್ಷಣಿಕ ಅಭಿವೃಧ್ದಿಗಾಗಿ ವಿದ್ಯಾಸಂಸ್ಥೆ ಸ್ಥಾಪಿಸಿ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ, ಪ್ರತಿ ತಿಂಗಳು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಗಳು ನಡೆಸುವುದರೊಂದಿಗೆ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಯಲಹಂಕ ಚೊಕ್ಕನಹಳ್ಳಿ ಕಾಳಿಪೀಠ ಮಹಾಸಂಸ್ಥಾನ ಮಠದ ಅರುಣ್‌ಗುರುಜೀ ಆಶ್ರೀರ್ವಾಚನ ನೀಡಿದರು, ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ಕೊರಟಗೆರೆ ಪಿಎಸೈ ಚೇತನ್‌ಕುಮಾರ್, ಕೋಳಾಲ ಠಾಣೆಯ ಪಿಎಸೈ ಯೋಗಿಶ್, ದೇವಾಲಯ ಟ್ರಸ್ಟ್ನ ಕಾರ್ಯದರ್ಶಿ ಆರ್.ಮುರಳೀಕೃಷ್ಣ, ಖಜಾಂಚಿ ಆರ್. ಜಗದೀಶ್, ಧರ್ಮದರ್ಶಿಗಳಾದ ಡಾ.ಲಕ್ಷ್ಮೀಕಾಂತ ಟಿ.ಎಸ್, ಟಿಆರ್.ನಟರಾಜು, ಎಸ್.ಶ್ರೀಪ್ರಸಾದ್, ರವಿರಾಜೇಅರಸ್, ಜಿ.ಎಲ್,ಮಂಜುನಾಥ್, ಓಂಕಾರ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಾಜು, ದೇವಾಲಯದ ಟ್ರಸ್ಟ್ನ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next