Advertisement

Goravanahalli ; ಶ್ರಿ ಮಹಾಲಕ್ಷ್ಮೀಯ ದರ್ಶನ ಪಡೆಯಲು ಹರಿದು ಬಂದ ಜನಸಾಗರ

08:10 PM Aug 25, 2023 | Team Udayavani |

ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಲಕ್ಷ್ಮೀಯ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತು.

Advertisement

ಮುಂಜಾನೆಯೇ ಮಹಿಳೆಯರು ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಆರ್ಶೀವಾದ ಪಡೆದ ನಂತರ, ಈ ಪುಣ್ಯ ಕ್ಷೇತ್ರಕ್ಕೆ  ಬಂದು ತಾಯಿಯ ದರ್ಶನ ಪಡೆದು ಪುನೀತರಾದರು. ಶ್ರಾವಣ ಮಾಸದ ಎರಡನೇ ಶುಕ್ರವಾರ ಪೌರ್ಣಿಮೆಗೆ ಮೊದಲು ಬರುವ ಹಬ್ಬವಾದ ವರ ಮಹಾಲಕ್ಷ್ಮೀ ಹಬ್ಬ ಸಕಲ ಸಂಪತ್ತುಗಳಿಗೆ ಮೂಲವಾಗಿಯೂ ಪುತ್ರ ಪೌತ್ರ ಸುಖದಾಯಕವಾಗಿ ಇರುವ ಪವನಕರ ಹಬ್ಬವಾಗಿದ್ದು, ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ನಾನಾಭಾಗದಿಂದ ಭಕ್ತರು ಆಗಮಿಸುವ ಪವಿತ್ರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಹಸ್ರಾರು ಭಕ್ತರು ಬಂದಿರುವ ನಿರೀಕ್ಷೆ ಇದ್ದು, ಉದ್ಘಾಟನೆಗೆ ಸಿದ್ಧವಾಗಿರುವ ನೂತನದಾಸೋಹ ಕೇಂದ್ರದಲ್ಲಿ ಸುಸಜ್ಜಿತವಾಗಿ ಪ್ರಸಾದವನ್ನು ವ್ಯವಸ್ಥೆ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಫ್ರೇಂಡ್ಸ್ ಗ್ರೂಪ್ ಗೆಳೆಯರ ಬಳಗ ದಾಸೋಹದ ವಿನಿಯೋಗ ನಿರ್ವಹಿಸಿತು.

ಕೆನರಾ ಬ್ಯಾಂಕ್ ತುಮಕೂರು ಜಿಲ್ಲೆ ಹಾಗೂ ತಾಲೂಕು ಶಾಖೆಗಳಿಂದ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸುವ ಮೂಲಕ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಲಾಡು ಪ್ರಸಾದದ ಬಾಕ್ಸ್ ಗಳನ್ನು ವಿತರಿಸಲಾಯಿತು.

ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲ್ಲೂ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರ ರಾಗಿ ಆಶೀರ್ವಾದ ಪಡೆದುಕೊಳ್ಳುತ್ತಾರೆ, ಹಾಗೆಯೆ ತೀತಾ ಜಲಾಶಯನ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತದೆ, ಬಂದಂತಹ ಭಕ್ತರು ಒಂದು ಬಾರಿ ಈ ತೀತಾ ಡ್ಯಾಂ ನೋಡಿ ಕಣ್ಮನ ತುಂಬಿಕೊಳ್ಳುತ್ತಾರೆ.

ಮಹಾಲಕ್ಷ್ಮೀ ದೇವಾಲಯದಲ್ಲಿ ವರ್ಷದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಸೇರಿದಂತೆ ಭಾನುವಾರ ವರಮಹಾಲಕ್ಷ್ಮೀ ಹಬ್ಬದಂದು ದೇವಿಗೆ ವಿವಿಧ ನಾನಾ ಅಲಂಕಾರದೊಂದಿಗೆ ವಿಶೇಷ ಪೂಜೆ, ವ್ರತ, ಹೋಮಗಳನ್ನು ಏರ್ಪಡಿಸಲಾಗುತ್ತದೆ.

Advertisement

ಗೊರವನಹಳ್ಳಿ ಪುಣ್ಯಕ್ಷೇತ್ರಕ್ಕೆ ಹೆಚ್ಚಿನ ಮಹಿಳಾ ಭಕ್ತಾಧಿಗಳು ಆಗಮಿಸುತ್ತಿರುವುದು ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸದುಪಯೋಗವನ್ನು ಪಡೆದು ಶ್ರೀ ಕ್ಷೇತ್ರಕ್ಕೆ ಬಂದು ಆ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹಬ್ಬದ ಪ್ರಯುಕ್ತ ಹೆಚ್ಚಿನ ಭಕ್ತಾಧಿಗಳು ಬರುತ್ತಿದ್ದಾರೆ. ಮಹಿಳೆಯರ ಹಾಗು ಸಾರ್ವಜನಿಕರ ಭದ್ರತೆಗೆ ಹೆಚ್ಚಿನ ಕೆಲಸವನ್ನು ತಾಲ್ಲೂಕು ಆಡಳಿತ ನಿರ್ವಸುತ್ತಿದ್ದು, ದೇವಾಲಯದ ಟ್ರಸ್ಟ್ ಸಹ ಅತ್ಯಂತ ಅನುಕೂಲವನ್ನು ನೀಡುತ್ತಿದೆ. ಮತ್ತೋಮ್ಮೆ ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು ಎಂದು ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸುತ್ತಾ ತುಮಕೂರು ಜಿಲ್ಲೆಯ ಸುಪ್ರಸಿದ್ಧ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ  ಹಬ್ಬವನ್ನು ಆಚರಿಸಲು ಭಕ್ತಾಧಿಗಳೊಂದಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ದೇವಿಯ ದರ್ಶನ ಪಡೆದುಕೊಂಡಿದ್ದೇವೆ.ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ,  ದೇವಾಲಯದ ಟ್ರಸ್ಟ್ ಅತ್ಯಂತ ವ್ಯವಸ್ಥಿತವಾಗಿ ಎಲ್ಲಾ ಭಕ್ತರಿಗೆ, ಪ್ರಯಾಣಿಕರಿಗೆ ಅನುಕೂಲವನ್ನು  ಕಲ್ಪಿಸಿದ್ದಾರೆ, ಭಕ್ತರು  ದರ್ಶನ ಪಡೆದು ಆ ತಾಯಿಯ ಕೃಪೆಗೆ ಪಾತ್ರರಾಗಿ ಎಂದು ತುಮಕೂರು ಜಿ.ಪಂ ಸಿಇಓ ಪ್ರಭು ಜಿ. ಹೇಳಿದರು.

ಪೋಲೀಸ್ ವರಿಷ್ಟಾಧಿಕಾರಿಗಳಾದ ರಾಹುಲ್ ಶಹಪೂರ್ ವಾಡ,  ತಹಶೀಲ್ದಾರ್‌ ಮುನಿಶಾಮಿರೆಡ್ಡಿ, ಪಿಎಸ್ ಐ ಚೇತನ್ ಕುಮಾರ್, ಟ್ರಸ್ಟ್ ನ ನಿರ್ವಹಣಾಧಿಕಾರಿ  ಕೇಶವಮೂರ್ತಿ, ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ಮುರುಳಿಕೃಷ್ಣ, ಖಜಾಂಚಿ ಜಗದೀಶ್, ಧರ್ಮದರ್ಶಿಗಳು, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸೇರಿದಂತೆ ಸಾವಿರಾರು ಭಕ್ತಾಧಿಗಳು  ದೇವಿದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next