ಘಟನೆಗೆ ಸಂಬಂಧಿ ಸಿದಂತೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಕೃತಿ ಸುಟ್ಟುಹಾಕಿ ಪ್ರತಿಭಟಿಸಲಾಯಿತು. ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಘಟನೆಗೆ ಸಂಬಂಧಿ ಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳುವಂತೆ, ಘಟನೆಯ ನೈತಿಕ ಹೊಣೆಹೊತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರೋಗ್ಯ ಸಚಿವ ಸಿದ್ದಾರ್ಥನಾಥ ಸಿಂಗ್ ಅವರು ಕೂಡಲೇ ರಾಜೀನಾಮೆ ಕೊಡುವಂತೆ, ಘಟನೆಗೆ ಕಾರಣರಾದವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ, ಮೃತಪಟ್ಟ ಮಕ್ಕಳ ಕುಟುಂಬದವರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಎಂ. ಹೊಸಮನಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಗಂಗಾಧರ ಮಾಡಬೂಳ್, ಜಿಲ್ಲಾಧ್ಯಕ್ಷ ರಮೇಶ ಡಿ. ಚಿಮ್ಮಾಯಿದ್ಲಾಯಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಮೋಘಾ, ಸಂಘಟನಾ ಕಾರ್ಯದರ್ಶಿ ನವೀನ ಕುಮಸಿ, ವಿವಿಧ ತಾಲೂಕು ಅಧ್ಯಕ್ಷರಾದ ಕಾಶೀನಾಥ ದಿವಂಟಗಿ, ಕಾಶೀನಾಥ ಶೆಳ್ಳಗಿ, ಸೋಮಶೇಖರ ಸಣ್ಣೂರ್, ಕಾಶಿನಾಥ ವಚ್ಚಾ, ಪ್ರದೀಪ ಡೊಣ್ಣೂರ, ಮುಖಂಡರಾದ ಶಿವಯೋಗಿ ಸಜ್ಜನ್, ಉಮೇಶ ಸಜ್ಜನ್, ಕರ್ಣ ಕೋರವಾರ್, ಆಕಾಶ್ ಮಂಗಲಗಿ, ಶಿವಯೋಗಿ ಕೊಳ್ಳೂರ್, ರಾಹುಲ್ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.
Advertisement