Advertisement

ಗೋರಖ್ ನಾಥ್ ದೇಗುಲದ ಬಳಿ ದಾಳಿ ಪ್ರಕರಣ; ಯೋಗಿ ಆದಿತ್ಯನಾಥ್ ನಿವಾಸಗಳಿಗೆ ಬಿಗಿ ಭದ್ರತೆ

02:44 PM Apr 07, 2022 | Team Udayavani |

ಲಕ್ನೋ: ಗೋರಖ್ ನಾಥ್ ದೇವಸ್ಥಾನದ ಮೇಲಿನ ದಾಳಿಯ ಕುರಿತು ತನಿಖೆ ಮುಂದುವರಿದಿರುವ ನಡುವೆಯೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಕ್ನೋ ಹಾಗೂ ಗೋರಖ್ ಪುರ ನಿವಾಸಗಳಿಗೆ ಇನ್ನಷ್ಟು ಭದ್ರತೆ ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಚಾಮುಂಡಿ ಬೆಟ್ಟದ 20 ನಿಮಿಷದ ಜರ್ನಿಗೆ ರೋಪ್ ವೇ ಯಾಕೆ ಬೇಕು? : ಪ್ರಮೋದಾದೇವಿ ಒಡೆಯರ್

ಏಪ್ರಿಲ್ 3ರಂದು ಮುರ್ತಾಝ್ ಅಬ್ಬಾಸಿ ಎಂಬಾತ ಗೋರಖ್ ಪುರದಲ್ಲಿರುವ ಪ್ರಸಿದ್ಧ ಗೋರಖ್ ನಾಥ್ ದೇಗುಲದ ಬಳಿ ಧಾರ್ಮಿಕ ಘೊಷಣೆ ಕೂಗುತ್ತಾ ಪೊಲೀಸರ ಮೇಲೆ ಮಚ್ಚಿನಿಂದ ದಾಳಿ ನಡೆಸಿರುವ ಘಟನೆ ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ಐಐಟಿ ಪದವೀಧರ, ಕೆಮಿಕಲ್ ಎಂಜಿನಿಯರ್ ಮುರ್ತಾಝ್ ಅಬ್ಬಾಸಿಯನ್ನು ಬಂಧಿಸಲಾಗಿತ್ತು. ಆದರೆ ತನ್ನ ಮಗ ಮಾನಸಿಕವಾಗಿ ಅಸ್ವಸ್ಥ ಎಂದು ಆರೋಪಿಯ ತಂದೆ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಸಿಎಂ ನಿವಾಸಕ್ಕೆ ಬಿಗಿ ಭದ್ರತೆ:

Advertisement

ಅಧಿಕೃತ ಮೂಲಗಳ ಪ್ರಕಾರ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅವರ ಲಕ್ನೋ ನಿವಾಸಕ್ಕೆ ಎರಡು ತುಕಡಿ ಸಿಆರ್ ಪಿಎಫ್ ಯೋಧರನ್ನು ಕಳುಹಿಸಲಾಗಿದ್ದು, ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ದಿನದ 24ಗಂಟೆಯೂ ಭದ್ರತೆ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಸಿಎಂ ನಿವಾಸಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರದೇಶದಲ್ಲಿ ಸಂಶಯಾಸ್ಪದ ಚಟುವಟಿಕೆ ಕಂಡು ಬಂದರು ಕೂಡಾ ಕೂಡಲೇ ತಪಾಸಣೆ ನಡೆಸುವ ಕ್ರಮ ತೆಗೆದುಕೊಳ್ಳಲಾಗಿದೆ. ಕಟ್ಟು ನಿಟ್ಟಿನ ಭದ್ರತೆ ನಡುವೆ ಜನರು ಜನತಾ ದರ್ಬಾರ್ ನಲ್ಲಿ ತಮ್ಮ ಅಹವಾಲು ಸಲ್ಲಿಸಬಹುದಾಗಿದೆ ಎಂದು ಹೇಳಿದೆ.

ಗೋರಖ್ ನಾಥಪುರ್ ದೇವಾಲದಯಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬ ಭಕ್ತರ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next