Advertisement

15 ವರ್ಷ ಬಳಿಕ ರಾಜ್ಯಸಭೆಗೆ

01:05 AM Jul 03, 2019 | mahesh |

ಚೆನ್ನೈ: ಎಂಡಿಎಂಕೆ ನಾಯಕ ವಿ.ಗೋಪಾಲಸ್ವಾಮಿ (ವೈಕೋ) 15 ವರ್ಷಗಳ ಬಳಿಕ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ. ಜು.18ರಂದು ನಡೆಯಲಿರುವ ಚುನಾವಣೆಯಲ್ಲಿ ಅವರು ಆಯ್ಕೆಯಾಗುವುದು ಖಚಿತ. ಈ ಹಿಂದೆ 1999ರಿಂದ 2004ರಲ್ಲಿ ಮೇಲ್ಮನೆ ಸದಸ್ಯರಾಗಿದ್ದರು. 2 ಬಾರಿ ಶಿವಕಾಶಿಯಿಂದ ಡಿಎಂಕೆಯಿಂದ ಲೋಕಸಭೆಗೂ ಆಯ್ಕೆಯಾಗಿದ್ದ ಅವರು, 2002ರಲ್ಲಿ ಪೋಟಾ ಕಾಯ್ದೆಯನ್ವಯ ಬಂಧನಕ್ಕೆ ಒಳಗಾಗಿದ್ದರು. 2014ರಲ್ಲಿ ಅವರ ವಿರುದ್ಧದ ಕೇಸು ಹಿಂಪಡೆಯಲಾಗಿತ್ತು. ತಮಿಳುನಾಡಿನಲ್ಲಿರುವ 3 ಸ್ಥಾನಗಳ ಪೈಕಿ 2ರಲ್ಲಿ ಡಿಎಂಕೆ ಸ್ಪರ್ಧಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next