Advertisement

Sagara: ತುಮರಿ ಮತ್ತು ಹಸಿರುಮಕ್ಕಿ ಸೇತುವೆಗಳು ಬದುಕಿನ ಸಂಪರ್ಕ ಸೇತು: ಗೋಪಾಲಕೃಷ್ಣ ಬೇಳೂರು

03:58 PM Jan 15, 2024 | Team Udayavani |

ಸಾಗರ: ತುಮರಿ ಮತ್ತು ಹಸಿರುಮಕ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕೇವಲ ಸೇತುವೆಯಲ್ಲ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಜನರ ಬದುಕಿನ ಸಂಪರ್ಕ ಸೇತು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

Advertisement

ತಾಲೂಕಿನ ಅಂಬಾರಗೋಡ್ಲು ದಡದಲ್ಲಿ ಅಂಬಾರಗೋಡ್ಲುವಿನಿಂದ ಕಳಸವಳ್ಳಿಗೆ ಸಂಪರ್ಕಿಸುವ ಲಾಂಚ್ ಮಾರ್ಗದ ರ‍್ಯಾಂಪ್ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿ, ತುಮರಿ ಸೇತುವೆ ನಿರ್ಮಾಣ ಜನರ ಕನಸು. ಅದನ್ನು ಶೀಘ್ರವಾಗಿ ಮುಗಿಸುವತ್ತ ಸಂಬಂಧಪಟ್ಟ ಗುತ್ತಿಗೆದಾರ ಕಂಪನಿ ಗಮನ ಹರಿಸಬೇಕು. ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಪಟ್ಟ ಸಚಿವರು ಇಲಾಖೆ ಮೇಲೆ ಒತ್ತಡ ಹೇರಲಾಗಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ.

ಕಾಮಗಾರಿ ರಾತ್ರಿ ಹಗಲು ನಡೆಯುತ್ತಿದ್ದು ಶೀಘ್ರದಲ್ಲಿಯೆ ಸೇತುವೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ತುಮರಿ ಸೇತುವೆ ಹಿನ್ನೀರ ಭಾಗದ ಜನರ ಹೋರಾಟಕ್ಕೆ ಸಂದ ಪ್ರತಿಫಲವಾಗಲಿದೆ ಎಂದು ಹೇಳಿದರು.

ಬೇಸಿಗೆ ಸಂದರ್ಭದಲ್ಲಿ ಹಿನ್ನೀರು ಕಡಿಮೆಯಾಗಿ ಲಾಂಚ್ ನಿಲ್ಲಿಸಲು ಸಹ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಂಚ್ ನಿಲ್ಲಲು ಸಮಸ್ಯೆಯಾಗಬಾರದು ಎಂದು ಅಗತ್ಯ ಇರುವ ಕಡೆಗಳಲ್ಲಿ ರ‍್ಯಾಂಪ್ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯಲು ಮಿನಿ ಬೋಟ್ ಬಳಕೆ ಮಾಡಲು ಸಹ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೋಮಶೇಖರ್ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ನವೀನ್ ಗೌಡ ಜಿ.ವಿ., ತಾರಾಮೂರ್ತಿ, ದೇವರಾಜ ಕಪ್ಪದೂರು, ಹರೀಶ್ ಗಂಟೆ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ: Lok Sabha Poll: ಚಿಕ್ಕಬಳ್ಳಾಪುರಕ್ಕೆ ನಾರ್ವೇಕರ್ ಕಾಂಗ್ರೆಸ್ ಉಸ್ತುವಾರಿ: ಆದೇಶ

 

Advertisement

Udayavani is now on Telegram. Click here to join our channel and stay updated with the latest news.

Next