Advertisement

ನಿಯಮ ಸಮಿತಿಗೆ ಗೋಪಾಲಕೃಷ್ಣನ್‌

10:11 AM Sep 16, 2019 | Team Udayavani |

ಹೊಸದಿಲ್ಲಿ: ವೈಯಕ್ತಿಕವಲ್ಲದ ಡೇಟಾ ನಿರ್ವಹಣೆಗೆ ಸಲಹೆ ನೀಡುವಂತೆ ಸಮಿತಿಯೊಂದನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರ ಜ್ಞಾನ ಸಚಿವಾಲಯವು ರಚಿಸಿದೆ. ಇನ್ಫೋಸಿಸ್‌ ಸಹಸಂಸ್ಥಾಪಕ ಎಸ್‌ ಗೋಪಾಲಕೃಷ್ಣನ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಇದು ವೈಯಕ್ತಿ ಕವಲ್ಲದ ಡೇಟಾ ಬಳಕೆ ಕುರಿತು ಸಲಹೆ ನೀಡಲಿದೆ. ಸಮು ದಾಯದ ಡೇಟಾ, ಅನಾಮಿ ಕವಾದ ಡೇಟಾ ಮತ್ತು ಇಕಾಮರ್ಸ್‌ ಡೇಟಾ ಸೇರಿದಂತೆ ವೈಯಕ್ತಿಕ ವಿವರಗಳನ್ನು ಹೊಂದಿಲ್ಲದ ಡೇಟಾ ಬಗೆಗಿನ ನಿಯಮಗಳು ವೈಯಕ್ತಿಕ ಡೇಟಾ ರಕ್ಷಣೆ ಮಸೂದೆ ಯಲ್ಲಿ ಇರುವುದಿಲ್ಲ.

Advertisement

ಹೀಗಾಗಿ ಇದಕ್ಕೆ ಪ್ರತ್ಯೇಕ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದ್ದು, ವೈಯಕ್ತಿಕ ಡೇಟಾ ನಿರ್ವಹಣೆಗಿಂತ ಪ್ರತ್ಯೇಕವಾದ ಮತ್ತು ಮುಕ್ತವಾದ ನೀತಿಯನ್ನು ಸಮಿತಿ ಪ್ರಸ್ತಾವಿಸಲಿದೆ.

ಈ ಸಮಿತಿಯಲ್ಲಿ ಏಳು ಸದಸ್ಯರು ಇರಲಿದ್ದು, ಸರಕಾರದ ವಿವಿಧ ಇಲಾ ಖೆಗಳ ಕಾರ್ಯದರ್ಶಿಗಳು ಮತ್ತು ಖಾಸಗಿ ಸಂಸ್ಥೆಗಳ ಪರಿಣಿತರು ಇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next