Advertisement
ಶ್ರೀ ಕೃಷ್ಣ ಬಾಲಾಲಯದಲ್ಲಿ ಬೆಳಗ್ಗೆ ನಿತ್ಯಪೂಜೆಯ ಅನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಉಡುಪಿ ಯಿಂದ ಆಗಮಿಸಿದ ವೇದಮೂರ್ತಿಗಳಾದ ಕೃಷ್ಣರಾಜ್ ಮತ್ತು ಪ್ರತಾಪ್ ರಾವ್ ಅವರ ಪೌರೋಹಿತ್ಯದಿಂದ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮ, ಮಹಾಲಕ್ಷಿ¾à ಹವನ, ರುದ್ರಾಭಿಷೇಕ, ಶಂಕರಾಚಾರ್ಯ ನಾಮಾರ್ಚನೆ, ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು ನಾಗೇಶ್ ರಾವ್ ಅವರ ಸಹಯೋಗದಿಂದ ನೆರವೇರಿತು.
Related Articles
Advertisement
ವೇದಮೂರ್ತಿ ಪ್ರತಾಪ್ ರಾವ್ ಅವರು ತಮ್ಮ ಉಪನ್ಯಾಸದಲ್ಲಿ ಹದಿಮೂರು ಶತಮಾನಗಳ ಹಿಂದೆ ಸಾûಾತ್ ಪರಶಿವನ ಅವತಾರ ಪುರುಷನಾಗಿ ಶಂಕರರು ಜನಿಸಿ ಅದ್ವೈತ ಸಿದ್ಧಾಂತದ ಪ್ರತಿಪಾದಕರೆನಿಸಿ, ತನ್ನ ಕೇವಲ 32 ವರ್ಷಗಳ ಜೀವಿತ ಕಾಲದಲ್ಲಿ ಸನಾತನ ಧರ್ಮ ಸಂರಕ್ಷಣೆಗಾಗಿ ಆಸೇತು ವಿಮಾಚಲ ಪರ್ಯಂತ ಪರ್ಯಟನೆ ಮಾಡಿ ನಾಲ್ಕು ದಿಶೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ ಎಂದರು.
ಶಿವ, ವಿಷ್ಣು, ಗಣಪತಿ, ದೇವಿ, ಸುಬ್ರಹ್ಮಣ್ಯ, ಸರಸ್ವತಿ, ಹೀಗೆ ಎಲ್ಲಾ ದೇವರ ಮೇಲೆ ಸರಳ ಸುಂದರ ಸ್ತೋತ್ರಗಳನ್ನು ರಚಿಸಿ ಅವುಗಳನ್ನು ನಿತ್ಯವೂ ಪಠಿಸುವಂತಹ ಭಕ್ತಿ ಮಾರ್ಗವನ್ನು ಆಚಾರ್ಯರು ನಮಗೆ ತೋರಿಸಿಕೊಟ್ಟಿದ್ದಾರೆ. ಅಂತಹ ಆಚಾರ್ಯರ ಮಾರ್ಗದರ್ಶನ ನಮಗೆ ದಾರಿದೀಪವಾಗಲಿ ಎಂದರು.
ತೀರ್ಥ-ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾ ಯಿತು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿಎಸ್‌ಕೆಬಿ ಅಸೋಸಿಯೇಶನ್, ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.