ವಾಷಿಂಗ್ಟನ್: ಅಮೆರಿಕದ ಸಂಸತ್‌ನ ಕೆಳಮನೆ, “ಹೌಸ್ ಆಫ್ ರೆಪ್ರಸೆಂಟೇಟಿವ್ಸ್’ನ ಸ್ಪೀಕರ್ ಆಗಿ ರಿಪಬ್ಲಿಕನ್ ಪಕ್ಷದ ಸಂಸದ ಕೆವಿನ್ ಮೆಕಾರ್ತಿ ಕೊನೆಗೂ ಆಯ್ಕೆಯಾಗಿದ್ದಾರೆ.
ಪ್ರಮುಖವಾಗಿ ರುವ ಹುದ್ದೆಗೆ ಮೆಕಾರ್ತಿ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿಯೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಷದಲ್ಲಿ ಹಲವಾರು ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆಯಲ್ಲಿ 15 ಸುತ್ತುಗಳ ಕಾಲ ಮಾತುಕತೆ ಹಾಗೂ ಆಂತರಿಕ ಮತದಾನ ನಡೆದಿತ್ತು.
ಅಂತಿಮವಾಗಿ ಕೆವಿನ್ ಮೆಕಾರ್ತಿ ಅವರು ತಮ್ಮದೇ ಪಕ್ಷದ ಹಕೀಮ್ ಸಿಕೋಯು ಜೆಫ್ರೀಸ್ ಅವರನ್ನು ಸೋಲಿಸಿದ್ದಾರೆ.
ಟ್ರಂಪ್ ಬೆಂಬಲ: 55ನೇ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಮೆಕಾರ್ತಿ “ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಯ ಕ್ಷಣಗಳಲ್ಲಿ ಬೆಂಬಲ ನೀಡಿದರು. ಈ ನಿಟ್ಟಿನಲ್ಲಿ ಅವರ ಮೇಲೆ ಸಂದೇಹಪಟ್ಟುಕೊಳ್ಳುವುದು ಬೇಡ’ ಎಂದರು.
ಇದು ಮೊದಲು: ಕೆವಿನ್ ಮೆಕಾರ್ತಿ ಆಯ್ಕೆ ಗೆ ನಡೆದಿದ್ದ ಪರಾಮರ್ಶೆ 160 ವರ್ಷಗಳಲ್ಲಿಯೇ ಮೊದಲು. 1855ರಲ್ಲಿ ಸ್ಪೀಕರ್ ಆಯ್ಕೆಗಾಗಿ 133 ಸುತ್ತು ಮಾತುಕತೆ ನಡೆದಿತ್ತು. ನ. 8ರ ಮಧ್ಯಂತರ ಚುನಾವಣೆಯಲ್ಲಿ 432 ಸದಸ್ಯ ಬಲದ ಕೆಳಮನೆಯಲ್ಲಿ ರಿಪಬ್ಲಿಕನ್ ಪಾರ್ಟಿ 222, ಡೆಮಾಕ್ರಾಟಿಕ್ ಪಕ್ಷ 212 ಸ್ಥಾನ ಗೆದ್ದುಕೊಂಡಿದ್ದವು.