Advertisement

ಗೂನಡ್ಕ : ಶಾಲಾ ಮಕ್ಕಳಿಂದ ವಿವಿಧ ಮಾದರಿಗಳ ಪ್ರದರ್ಶನ

01:16 PM Dec 20, 2018 | Team Udayavani |

ಅರಂತೋಡು : ಶಾಲೆಗಳಲ್ಲಿ ವಿದ್ಯಾರ್ಥಿಗಳು ದಿನ ನಿತ್ಯ ಶಿಕ್ಷಕರಿಂದ ಪಾಠ ಕೇಳುತ್ತಾರೆ. ಅರಂತೋಡು ಸಮೀಪದ ಮಾರುತಿ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲಿನ ವಿದ್ಯಾರ್ಥಿಗಳು ಅನೇಕ ಮಾದರಿಗಳ ಪ್ರದರ್ಶನ ಮಾಡಿ ಶಿಕ್ಷಕರು, ಸಿಬಂದಿ, ಶಾಲಾ ಆಡಳಿತ ಮಂಡಳಿಯವರಿಗೆ ಪಾಠ ಮಾಡಿದರು. ನರ್ಸರಿ ತರಗತಿಯ ವಿದ್ಯಾರ್ಥಿಗಳು ಗಣಿತದ ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.

Advertisement

ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ವಿವಿಧ ಹೂವುಗಳನ್ನು ಹಾಗೂ ವಿವಿಧ ಎಲೆಗಳನ್ನು ಪ್ರದರ್ಶನ ಮಾಡಿ ವಿವರಿಸಿದರು. ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ವಿವಿಧ ತರಕಾರಿ ಬೀಜಗಳನ್ನು ಅಲಂಕರಿಸಿ ಪ್ರದರ್ಶನ ಮಾಡಿ ವಿವರಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿವಿಧ ಔಷಧೀಯ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಔಷಧಿಯಾಗಿ ಉಪಯೋಗಿಸುವುದರಿಂದ ಏನು ಪ್ರಯೋಜನ, ಅದನ್ನು ಉಪಯೋಗಿಸುವ ವಿಧಾನ, ಎಷ್ಟು ಸಮಯ ಉಪಯೋಗಿಸಬೇಕು, ಯಾವ ಕಾಯಿಲೆಗಳಿಗೆ ಇದು ಉಪಯುಕ್ತ ಆಗುತ್ತದೆ ಎನ್ನುವ ಮಾಹಿತಿಗಳನ್ನು ನೀಡಿದ್ದು ವಿಶೇಷವಾಗಿತ್ತು.

ವಿನೂತನ ಕಾರ್ಯಕ್ರಮ
ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾದ ವಿನೂತನ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತೇವೆ. ಶಾಲೆಯಲ್ಲಿ ಹಮ್ಮಿಕೊಂಡ ಅನೇಕ ಮಾದರಿಗಳ ಪ್ರದರ್ಶನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿ ಮಾದರಿಗಳನ್ನು ವಿವರಿಸಿದರು. ಇದರಿಂದಾಗಿ ನಾವು ಕೂಡ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು.
– ಅನಸೂಯಾ
ಉಪಪ್ರಾಂಶುಪಾಲೆ 

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next