Advertisement

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

09:11 AM Sep 19, 2024 | Team Udayavani |

ಲಂಡನ್‌: ಐದು ವರ್ಷಗಳ ಹಿಂದೆ ತನ್ನ ಆನ್‌ಲೈನ್‌ ಜಾಹೀರಾತು ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 13,778 ಕೋಟಿ (1.49 ಯುರೋ)ರೂ.ಗಳಷ್ಟು ಯುರೋಪಿಯನ್‌ ಯೂನಿಯನ್‌ ಆ್ಯಂಟಿಟ್ರಸ್ಟ್‌ ದಂಡದ ವಿರುದ್ಧದ ಪ್ರಕರಣದಲ್ಲಿ ಗೂಗಲ್‌ ಕಾನೂನು ಸಮರದಲ್ಲಿ ಗೆಲುವು ಪಡೆದಿದೆ.

Advertisement

27 ರಾಷ್ಟ್ರಗಳ ಉನ್ನತ ಆ್ಯಂಟಿಟ್ರಸ್ಟ್‌ ಜಾರಿದಾರನಾದ ಯುರೋಪಿಯನ್‌ ಕಮಿಷನ್‌ 2019ರಲ್ಲಿ ವಿಧಿಸಿದ್ದ ಈ ದಂಡವನ್ನು ತೆಗೆದುಹಾಕುವುದಾಗಿ ಯುರೋ ಪಿಯನ್‌ ಯೂನಿಯನ್‌ನ ಕೋರ್ಟ್‌ ಹೇಳಿದೆ. ಗೂಗಲ್‌ ತನ್ನ ಜಾಹೀರಾತು ಒಪ್ಪಂದಗಳಲ್ಲಿ ಪ್ರತ್ಯೇಕ ಷರತ್ತುಗಳನ್ನು ವಿಧಿಸಿತ್ತು, ಇದರಿಂದ ಜಾಹೀರಾತುದಾರು ಹೆಚ್ಚು ವೆಚ್ಚ ಭರಿಸುವ ಹಾಗೂ ಕಡಿಮೆ ಆಯ್ಕೆಗಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪವನ್ನು ಗೂಗಲ್‌ ಎದುರಿಸುತ್ತಿತ್ತು.

ಇದನ್ನೂ ಓದಿ: Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next