ನವದೆಹಲಿ: ಜಿ ಮೇಲ್ ಖಾತೆ ಹೊಂದಿರುವವರು ಅದನ್ನು ನಿರಂತರವಾಗಿ ಬಳಕೆ ಮಾಡದಿದ್ದರೆ..ಮುಂದಿನ ತಿಂಗಳು ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Crime: ಅರುಣ್ ಪುತ್ತಿಲ ಕಚೇರಿ ಎದುರು ತಲವಾರು ಝಳಪಿಸಿದ ಐವರು..!
2023ರ ಡಿಸೆಂಬರ್ ನಲ್ಲಿ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದಿರುವ ಜಿ ಮೇಲ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇದರಿಂದಾಗಿ ಲಕ್ಷಾಂತರ ಜಿ ಮೇಲ್ ಖಾತೆಗಳು ರದ್ದಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಮೇ ತಿಂಗಳಿನಲ್ಲಿ ಗೂಗಲ್ ನ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ರುಚ್ ಕ್ರಿಚೇಲಿ ಬ್ಲಾಗ್ ಪೋಸ್ಟ್ ನಲ್ಲಿ ಉಲೇಖಿಸಿದಂತೆ, ಎರಡು ವರ್ಷಗಳ ಕಾಲ ಬಳಕೆ ಮಾಡದಿರುವ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ. ಒಂದು ವೇಳೆ ಗೂಗಲ್ ಖಾತೆಯನ್ನು ಕನಿಷ್ಠ ಎರಡು ವರ್ಷಗಳಿಂದ ಉಪಯೋಗಿಸದಿದ್ದಲ್ಲಿ ಅಥವಾ ಸೈನ್ ಇನ್ ಮಾಡದಿದ್ದಲ್ಲಿ ನಾವು ಖಾತೆ ಮತ್ತು ಅದರ ಕಂಟೆಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದರಲ್ಲಿ ಜಿ ಮೇಲ್, ಡಾಕ್ಯುಮೆಂಟ್, ಡ್ರೈವ್, ಮೀಟ್, ಕ್ಯಾಲೆಂಡರ್ ಮತ್ತು ಗೂಗಲ್ ಫೋಟೊಸ್ ಕೂಡಾ ಸೇರಿದೆ ಎಂದು ತಿಳಿಸಿದ್ದರು.
ನಮ್ಮ ಆಂತರಿಕ ಅಂಕಿಅಂಶದ ಪ್ರಕಾರ, ಅಂದಾಜು 10 ಲಕ್ಷ ನಿಷ್ಕ್ರಿಯ ಖಾತೆಗಳಿವೆ. ಆದರೆ ಜಿ ಮೇಲ್ ವೈಯಕ್ತಿಕ ಖಾತೆಗಳನ್ನು ಮಾತ್ರ ರದ್ದು ಮಾಡಲಾಗುತ್ತಿದೆ. ಶಾಲೆ, ಉದ್ಯಮದಂತಹ ಸಂಘ, ಸಂಸ್ಥೆಗಳ ಜಿ ಮೇಲ್ ಖಾತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ತಿಳಿಸಿದೆ.