Advertisement

ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ: ಆಸ್ಟ್ರೇಲಿಯಾಕ್ಕೆ ಗೂಗಲ್ ಬೆದರಿಕೆ

04:47 PM Jan 23, 2021 | Team Udayavani |

ವೆಲ್ಲಿಂಗ್ಟನ್: ಒಂದು ವೇಳೆ ಸರಕಾರ ಮಾಧ್ಯಮ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಆದಲ್ಲಿ ನಾವು ದೇಶದಲ್ಲಿ ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಆಸ್ಟ್ರೇಲಿಯಾಕ್ಕೆ ಜಾಗತಿಕ ಟೆಕ್ ದೈತ್ಯ ಗೂಗಲ್ ಕಂಪೆನಿ ಬೆದರಿಕೆ ಹಾಕಿದೆ.

Advertisement

ಈ ನಿಯಮ ಜಾರಿಗೆ ಬಂದಿದ್ದೇ ಆದಲ್ಲಿ ಸ್ಥಳೀಯ ಮಾಧ್ಯಮಗಳು ತನ್ನೊíದಿಗೆ ಹಂಚುವ ಮಾಹಿತಿಗೆ ಗೂಗಲ್ ಮತ್ತು ಫೇಸ್‌ಬುಕ್ ಹಣ ಪಾವತಿ ಮಾಡಲೇಬೇಕಾಗುತ್ತದೆ. ಹಾಗಾಗಿ ಈ ನಿಯಮದ ವಿರುದ್ಧ ಗೂಗಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೇಶದಲ್ಲಿ ಸ್ಥಳೀಯ ಸುದ್ದಿಗಳು ಗೂಗಲ್‌ನಲ್ಲಿ ಪ್ರಕಟವಾಗಬೇಕಾದರೆ ನೀವು ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾ ಸರಕಾರ ಗೂಗಲ್ ಸಂಸ್ಥೆಗೆ ತಿಳಿಸಿದೆ. ಸರಕಾರ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾದರೆ ಆಸ್ಟ್ರೇಲಿಯಾದಲ್ಲಿ ನಾವು ಸರ್ಚ್ ಎಂಜಿನ್ ಸ್ಥಗಿತಗೊಳಿಸಲಿದ್ದೇವೆ ಎಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಸ್ಕಾಟ್ ಮೊರಿಸನ್, ಈ ಬೆದರಿಕೆಗಳಿಗೆ ನಾವು ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.

ಗೂಗಲ್ ಆಸ್ಟ್ರೇಲಿಯಾದಲ್ಲಿ ಚಾಲನೆಯಲ್ಲಿರಬೇಕಾದರೆ, ದೇಶದ ಕೆಲವು ನಿಯಮಗಳನ್ನು ಅನುಸರಿಬೇಕು. ಈ ಕಾನೂನು ಸಂಸತ್‌ನಲ್ಲಿಯೂ ಮಂಡಿಸಲಾಗಿದೆ ಎಂದು ಮೊರಿಸನ್ ತಿಳಿಸಿದ್ದಾರೆ. ಸೆನೆಟ್‌ನಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ ಗೂಗಲ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮೆಲ್ ಸಿಲ್ವಾ ಈ ಹೊಸ ನಿಯಮಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದಿದ್ದರು.

ಸರಕಾರ ನಿಯಮಗಳನ್ನು ಜಾರಿಗೆ ತಂದರೆ, ಆಸ್ಟ್ರೇಲಿಯಾದಲ್ಲಿ ಗೂಗಲ್ ಲಭ್ಯವಾಗುವುದಿಲ್ಲ. ಈ ಆಯ್ಕೆ ಬಿಟ್ಟರೆ ನಮಗೆ ಬೇರೆ ಮಾರ್ಗ ಇಲ್ಲ ಎಂದು ಸಿಲ್ವಾ ಪ್ರತಿಕ್ರಿಯಿಸಿದ್ದಾರೆ.

Advertisement

ಇನ್ನು ಜಗತ್ತಿನ ಇತರೆ ಹಲವು ದೇಶಗಳಂತೆ, ಆಸ್ಟ್ರೇಲಿಯಾದಲ್ಲೂ ಅಂತರ್ಜಾಲ ಹುಡುಕಾಟಗಳಲ್ಲಿ ಗೂಗಲ್ ಪ್ರಾಬಲ್ಯ ಹೊಂದಿದೆ. ರಾಷ್ಟ್ರದ ಶೇ.95 ಜನರು ಗೂಗಲ್ ಬಳಸುತ್ತಾರೆ ಎಂದು ಸೆನೆಟರ್‌ಗಳಿಗೆ ಸಿಲ್ವಾ ತಿಳಿಸಿದರು. ಫೇಸ್‌ಬುಕ್ ಸಹ ಆಸ್ಟ್ರೇಲಿಯಾ ನಿಯಮಗಳನ್ನು ವಿರೋಧಿಸುತ್ತದೆ ಮತ್ತು ತನ್ನ ಸೈಟ್‌ನಿಂದ ಆಸ್ಟ್ರೇಲಿಯಾಗೆ ಸಂಬಂಧಿಸಿದ ಸುದ್ದಿಗಳನ್ನು ತೆಗೆದುಹಾಕುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next