Advertisement

ಯುಪಿಐಗೆ ಗೂಗಲ್‌ ಶಹಬ್ಟಾಸ್‌

10:07 AM Dec 19, 2019 | Team Udayavani |

ಡಿಜಿಟಲ್‌ ಇಂಡಿಯಾದ ಭಾಗವಾಗಿ ಜಾರಿಗೆ ಬಂದಿದ್ದು ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ). ಈ ಮೂಲಕ ಹಣ ವರ್ಗಾವಣೆ ಮೊಬೈಲ್‌ನಲ್ಲೇ ಮಾಡುವುದನ್ನು ಸುಲಭ ಸಾಧ್ಯವನ್ನಾಗಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು ಇಂತಹ ರೀತಿಯ ವ್ಯವಸ್ಥೆ ಅಳವಡಿಸಿಕೊಳ್ಳಲು ಗೂಗಲ್‌ ಅಮೆರಿಕದ ಫೆಡರಲ್‌ ರಿಸರ್ವ್‌ಗೆ ಶಿಫಾರಸು ಮಾಡಿದೆ. ಯುಪಿಐ ಯಶಸ್ಸಿನ ಹಿನ್ನೆಲೆಯಲ್ಲಿ ಅದರ ಮಾಹಿತಿಗಳು ಇಲ್ಲಿವೆ.

Advertisement

ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಸೌಲಭ್ಯವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್‌ ಫೋನ್‌ಗಳನ್ನು ಬಳಸಿ ನೇರ ಹಣ ವರ್ಗಾವಣೆ ಮಾಡುವ ಒಂದು ಪಾವತಿ ವ್ಯವಸ್ಥೆ ಇದಾಗಿದೆ.

ಕಾರ್ಯ ಹೇಗೆ?
ಯುಪಿಐ 24/7 ಕಾರ್ಯನಿರ್ವಹಿಸುತ್ತಿದ್ದು, ಇದು ತುಂಬಾ ಸುರಕ್ಷಿತ, ತ್ವರಿತ, ಸುಭದ್ರ, ಪರಿಣಾಮಕಾರಿ. ಇದರ ಬಳಕೆಗೆ ಯುಪಿಐ ಸೌಕರ್ಯ ಇರುವ ಯಾವುದೇ ಪೇಮೆಂಟ್‌ ಆ್ಯಪ್‌ ಅನುಸ್ಥಾಪಿಸಿಕೊಂಡರೆ ಸಾಕು.

ಯಶಸ್ಸಿನ ಗುಟ್ಟು
ಗ್ರಾಹಕರು ತಮ್ಮ ಬ್ಯಾಂಕು ಖಾತೆಯಿಂದ ಯುಪಿಐ ಮೂಲಕ ಯಾವುದೇ ವ್ಯಾಪಾರಿಗೆ ಹಣವನ್ನು ನೇರವಾಗಿ ಪಾವತಿಸಬಹುದು. ವ್ಯವಹಾರದ ವೇಳೆ ಕ್ರೆಡಿಟ್‌ ಕಾರ್ಡ್‌ ವಿವರ, ಐಎಫ್ಎಸ್ಸಿ ಕೋಡ್‌ ಅಥವಾ ನೆಟ್‌ ಬ್ಯಾಂಕಿಂಗ್‌/ವ್ಯಾಲೆಟ್‌ ಪಾಸ್ವರ್ಡ್‌ ಗಳನ್ನು ನಮೂದಿಸಬೇಕೆಂಬ ಯಾವುದೇ ತೊಂದರೆಯಿರುವುದಿಲ್ಲ. ಆದ್ದರಿಂದ ಅಲ್ಪಾವಧಿಯಲ್ಲೇ ಇದು ಅತ್ಯಂತ ಯಶಸ್ಸು ಪಡೆದಿದೆ.

26 ದಶಲಕ್ಷ
2016ರಲ್ಲಿ ಯುಪಿಐ ಶುರುವಾಗಿ ಮೊದಲ ತ್ತೈಮಾಸಿಕದಲ್ಲೇ ಸುಮಾರು 26 ದಶಲಕ್ಷದಷ್ಟು ವಹಿವಾಟು ಚಟುವಟಿಕೆಗಳು ನಡೆದಿವೆ.

Advertisement

120 ಕೋ. ವಹಿವಾಟು
ಈ ವರ್ಷ ನವೆಂಬರ್‌ನಲ್ಲಿ ಯುಪಿಐ ಮೂಲಕ 120 ಕೋಟಿ ವಹಿವಾಟು ನಡೆದಿದ್ದು, ಅವುಗಳ ಮೌಲ್ಯ 1.89 ಲಕ್ಷ ಕೋಟಿ ರೂ. ಆಗಿದೆ.

ಶೇ.45ರಷ್ಟು
ಯುಪಿಐಯ ಭೀಮ್‌ ಆ್ಯಪ್‌ ಮೂಲಕ ಶೇ.45ರಷ್ಟು ವಹಿವಾಟು ಚಟುವಟಿಕೆಗಳು ನಡೆಯುತ್ತಿದ್ದು, ಇತರ ಹಣ ವರ್ಗಾವಣೆ ವ್ಯವಸ್ಥೆಗಳಿಗೆ ಹೋಲಿಸಿದರೆ ಸಿಂಹ ಪಾಲನ್ನು ಹೊಂದಿದೆ. ಮುಂದಿನ ವರ್ಷಗಳಲ್ಲಿ ಶೇ.30-40ರಷ್ಟು ಹೊಸ ಬಳಕೆದಾರರನ್ನು ಹೊಂದುವ ನಿರೀಕ್ಷೆಯಿದೆ.

ಉಪಯೋಗ
· ಸುರಕ್ಷಿತ ಮತ್ತು ಸರಳ ವಿಧಾನದಲ್ಲಿ ತಕ್ಷಣಕ್ಕೆ ಹಣ ವರ್ಗಾವಣೆ
· ಹಣಕಾಸು ವರ್ಗಾವಣೆ ದುರ್ಬಳಕೆ ಆಗುವುದಿಲ್ಲ
· ನಗದುರಹಿತ ಆರ್ಥಿಕತೆಗೆ ಪೂರಕ
· ಖಾತೆದಾರನ ನಿರ್ದಿಷ್ಟ ಗುರುತಿನ ವಿಳಾಸಕ್ಕೆ ಸುಲಭವಾಗಿ ಹಣ ವರ್ಗಾವಣೆ
· 50 ಸಾವಿರದಿಂದ ಗರಿಷ್ಠ 1 ಲಕ್ಷ ರೂ. ವರೆಗೆ ಹಣ ರವಾನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next