ಮುಂಬಯಿ: ಚೀನ ಮೂಲದ ಆ್ಯಪ್ ಗಳನ್ನು ಡಿಲೀಟ್ ಮಾಡುವ ರಿಮೂವ್ ಚೀನ ಆ್ಯಪ್‌ಗೆ ಭರ್ಜರಿ ಹಿಟ್ಸ್ ಸಿಕ್ಕಿದ ಬೆನ್ನಲ್ಲೇ ಗೂಗಲ್ ಅದನ್ನು ಪ್ಲೇ ಸ್ಟೋರ್‌ನಿಂದ ವಜಾ ಮಾಡಿದೆ.
ಅಲ್ಲಿಗೆ ಚೀನದ ಆ್ಯಪ್ ಗಳನ್ನು ಜನರು ಗುರುತಿಸಿ ಡಿಲೀಟ್ ಮಾಡಲು ಕಾರಣವಾಗಿದ್ದ ಆ್ಯಪ್ ಕಥೆ ಮೂಲೆ ಸೇರಿದೆ.
ಇದಕ್ಕೆ ಕಾರಣ ಆ ಆ್ಯಪ್ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡಿಲೀಟ್ ಮಾಡಲು ಗ್ರಾಹಕರಿಗೆ ಪ್ರೇರೇಪಿಸುತ್ತದೆ ಎಂಬುದು ಮತ್ತು ಪ್ಲೇ ಸ್ಟೋರ್‌ನ ಹಲವು ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಅದನ್ನು ತೆಗೆದುಹಾಕಲಾಗಿದೆ.
ಮೇ 17ರಂದು ರಿಮೂವ್ ಚೀನ ಆ್ಯಪ್ಸ್ ಅನ್ನು ಗೂಗಲ್ ಪ್ಲೇನಲ್ಲಿ ಪರಿಚಯಿಸಲಾಗಿದ್ದು ಆ್ಯಂಡ್ರಾಯಿಡ್ ಫೋನ್‌ಗಳಿಗೆ ಬಳಸಲಾಗಿತ್ತು.
ಚೀನ ವಿರುದ್ಧ ವಿಶ್ವಾದ್ಯಂತ ಅಸಮಾಧಾನ ಮೊಳೆತಿರುವ ಸಂದರ್ಭದಲ್ಲೇ ಈ ಆ್ಯಪ್ ವೇದಿಕೆಗೆ ಬಂದಿದ್ದು ಕೆಲವೇ ದಿನಗಳಲ್ಲಿ 50 ಲಕ್ಷ ಗ್ರಾಹಕರನ್ನು ಹೊಂದಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಇದಕ್ಕೆ ಗ್ರಾಹಕರು 4.9 ಸ್ಟಾರ್ ರೇಟಿಂಗ್‌ಗಳನ್ನೂ ನೀಡಿದ್ದರು.