Advertisement

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿವೆ ಅಪಾಯಕಾರಿ ಆ್ಯಪ್‌ ಗಳು

12:11 AM Mar 14, 2021 | Team Udayavani |

ಯೋಚಿಸದೇ ಯಾವುದೇ ಆ್ಯಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡುವುದು, ಇನ್‌ಸ್ಟಾಲ್‌ ಮಾಡುವುದು ತುಂಬಾ ಅಪಾಯಕಾರಿ ಯಾಗಿದೆ. ಈ ಕುರಿತಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಸಂಶೋಧಕರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಬ್ಯಾಂಕ್‌ ಖಾತೆಯನ್ನು ಖಾಲಿ ಮಾಡುವ 8 ಅಪಾಯಕಾರಿ ಆ್ಯಪ್ಲಿಕೇಶನ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವುದು ಕಂಡುಬಂದಿವೆ.

Advertisement

ಗೂಗಲ್‌ಗ‌ೂ ಸಿಗುತ್ತಿಲ್ಲ!
ಗೂಗಲ್‌ ಪ್ಲೇ ಪ್ರೊಟೆಕ್ಟ್ ಗೆ ಈ ಮಾಲ್ವೇರ್‌ ಅನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಚೆಕ್‌ ಪಾಯಿಂಟ್‌ ರಿಸರ್ಚ್‌ ವರದಿ ಮಾಹಿತಿ ನೀಡಿದೆ. 8 ಆ್ಯಪ್ಲಿಕೇಶನ್‌ಗಳ ಮೂಲಕ ಹರಡುತ್ತಿದ್ದ ಮಾಲ್ವೇರ್‌ ಡ್ರಾಪರ್‌ ಅನ್ನು “ಕ್ಲಾಸ್ಟ್‌ 82′ ಎಂದು ಕರೆಯಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅತ್ಯಂತ ಭಯಾನಕ ಸಂಗತಿಯೆಂದರೆ ಡ್ರಾಪರ್‌ ಮೂಲಕ ಹರಡುವ ಮಾಲ್ವೇರ್‌ಗಳು ನೇರವಾಗಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತವೆ. ಈ ಡ್ರಾಪರ್‌ ಅನ್ನು ಗೂಗಲ್‌ ಪ್ಲೇ ಪ್ರೊಟೆಕ್ಟ್‌ನ ಕಣ್ತಪ್ಪಿಸಿ ಒಳನುಸುಳುತ್ತವೆ.

ಈ ಡ್ರಾಪರ್‌ ಎಷ್ಟು ಅಪಾಯಕಾರಿ
ಈ ಡ್ರಾಪರ್‌ ಬಳಕೆದಾರರ ಸ್ಮಾರ್ಟ್‌ ಫೋನ್‌ನಲ್ಲಿ ಏಲಿಯನ್‌ಬಾಟ್‌ (AlienBot) ಬ್ಯಾಂಕರ್‌ ಅನ್ನು ಸ್ಥಾಪಿಸುತ್ತದೆ. ಇದು ಹಣಕಾಸು ಆ್ಯಪ್ಲಿಕೇಶನ್‌ಗಳನ್ನು ದುರ್ಬಳಕೆ ಮಾಡಿಕೊಂಡು “ಕೋಡ್‌’ ಅನ್ನು ಆ್ಯಪ್‌ನ ಒಳಗೆ ಸೇರಿಸಲು ಥರ್ಡ್‌ ಪಾರ್ಟಿಗೆ ಅನುವು ಮಾಡಿಕೊಡುತ್ತದೆ. ಇದು ನಿಮ್ಮ ಮೊಬೈಲ್‌ ಸಾಧನಕ್ಕೆ ಮೂರನೇ ವ್ಯಕ್ತಿಗೆ ಪ್ರವೇಶ ಕಲ್ಪಿಸಲು ನೆರವಾಗುತ್ತದೆ. ಫೋನ್‌ನಲ್ಲಿರುವ ಬ್ಯಾಂಕಿಂಗ್‌ ಆ್ಯಪ್ಲಿಕೇಶನ್‌ಗಳನ್ನು ಇವುಗಳು ಸುಲಭವಾಗಿ ಅಪಹರಿಸಬಹುದಾಗಿದ್ದು, ನಿಮ್ಮ ಹಣಕಾಸಿನ ವಿವರಗಳನ್ನು ಕದಿಯಬಹುದು.

ನಿಮ್ಮ ಫೋನ್‌ ಅವರ ಕೈಗೆ
ಮಾಲ್ವೇರ್‌ಗಳ ಮೂಲಕ ನಿಮ್ಮ ಫೋನ್‌ ಅನ್ನು ಹ್ಯಾಕರ್‌ಗಳು ಇತರ ಕಾರ್ಯಗಳಿಗೆ ಸಹ ಬಳಸ ಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಹೊಸ ಆ್ಯಪ್ಲಿಕೇಶನ್‌ ಅನ್ನೂ ಸ್ಥಾಪಿಸಬಹುದು. ಅಥವಾ ಟೀಮ್‌ವೀವರ್‌ ಮೂಲಕ ನಿಮ್ಮ ಸಾಧನವನ್ನು ನಿಯಂತ್ರಿಸಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಸುರಕ್ಷಿತವಾಗಿಡುವುದು ಹೇಗೆ?
ಮೊದಲು ಸೆಟ್ಟಿಂಗ್‌ಗಳಿಗೆ ಹೋಗಿ ಅಅನಂತರ‌ ಆ್ಯಪ್ಲಿಕೇಶನ್‌ನಲ್ಲಿ ಕೆಳಗೆ ಸಾðಲ್‌ ಮಾಡಿ ಮತ್ತು ಈ ಅನುಮಾನಾಸ್ಪದ ಆ್ಯಪ್ಲಿಕೇಶನ್‌ಗಳನ್ನು (ನೀವು ಬಳಸದೇ ಇರುವ, ಹೊಸ) ಹುಡುಕಿ, ಅಅನಂತರ‌ ಆ್ಯಪ್ಲಿಕೇಶನ್‌ನಲ್ಲಿ ಟ್ಯಾಪ್‌ ಮಾಡಿ ಮತ್ತು ಅನ್‌ಇನ್‌ಸ್ಟಾಲ್‌ ಕ್ಲಿಕ್‌ ಮಾಡಿ. ಇದಲ್ಲದೆ ಬ್ಯಾಂಕಿಂಗ್‌ ಆ್ಯಪ್ಲಿಕೇಶನ್‌ ಮತ್ತು ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಪಾಸ್‌ವರ್ಡ್‌ ಅನ್ನು ಬದಲಾಯಿಸುವುದು ಸಹ ಉತ್ತಮ ಆಯ್ಕೆಯಾಗಿದೆ.

Advertisement

ಯಾವುದು ಆ 8 ಆ್ಯಪ್ಲಿಕೇಶನ್‌?
1 ಕೇಕ್‌ ವಿಪಿಎನ್‌(com.lazycoder.cakevpns)
2 ಪೆಸಿಫಿಕ್‌ ವಿಪಿಎನ್‌ (com.protectvpn.freeapp)
3 ಇ-ವಿಪಿಎನ್‌ (com.abcd.evpnfree)
4 ಬೀಟ್‌ಪ್ಲೇಯರ್‌ (com.crrl.beatplayers)
5 ಕ್ಯುಆರ್‌/ ಬಾರ್‌ಕೋಡ್‌ ಸ್ಕ್ಯಾನರ್‌ MAX (com.bezrukd.qrcodebarcode)
6 ಮ್ಯೂಸಿಕ್‌ ಪ್ಲೇಯರ್‌ (com.revosleap.samplemusicplayers)
7 ಟೂಲ್ಟಿಪ್ನೇಟರ್‌ ಲೈಬ್ರರಿ (com.mistergrizzlys.docscanpro)
8. ಕ್ಯುರೆಕಾರ್ಡರ್‌ (com.record. callvoicere

Advertisement

Udayavani is now on Telegram. Click here to join our channel and stay updated with the latest news.

Next