Advertisement

ಏಳಕ್ಕೂ ಹೆಚ್ಚು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಗೂಗೂಲ್‌ ಪಿಕ್ಸೆಲ್‌ 4

09:48 AM Oct 13, 2019 | Sriram |

ಹೊಸದಿಲ್ಲಿ: ಅ.15 ರಂದು ಮಾರುಕಟ್ಟೆಗೆ ಬರಲಿರುವ ಗೂಗಲ್‌ ಪಿಕ್ಸೆಲ್‌ ರೂಪುರೇಷೆ ವಿಶೇಷತೆಗಳ ಕುರಿತಾಗಿ ಮಾಹಿತಿ ಹೊರಬಿದ್ದಿದ್ದು, 7 ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ.

Advertisement

ಪಿಂಕ್‌, ಸ್ಕೈ ಬ್ಲೂ, ಹಳದಿ ಸೇರಿದಂತೆ 7 ಬಣ್ಣ
ಈ ಮೊದಲಿನ ಪಿಕ್ಸೆಲ್‌ ಸರಣಿ ಫೋನ್‌ಗಳು ಕೇವಲ ಮೂರು ಬಣ್ಣಗಳಲ್ಲಿ ಮಾತ್ರ ಲಭ್ಯದಲ್ಲಿದ್ದು, ಇದೀಗ ಇದರ ಅಪ್‌ಡೇಟ್‌ ವರ್ಷನ್‌ ಆಗಿ ಪಿಂಕ್‌, ಆಕಾಶ ನೀಲಿ, ಹಳದಿ, ಹಸಿರು, ಬಿಳಿ, ಕಂಪು ಹಾಗೂ ಓ ಸೋ ಆರೆಂಜ್‌ ಬಣ್ಣಗಳಲ್ಲಿ ಗ್ರಾಹಕರ ಕೈ ಸೇರಲಿದೆ.

ಗುಣಲಕ್ಷಣಗಳು
ಈ ಸ್ಮಾರ್ಟ್‌ಫೋನ್‌ ನಲ್ಲಿ 855 ಎಸ್‌ಒಸಿ ಸ್ನಾಪ್‌ಡ್ರಾಗನ್‌ ಚಿಪ್‌, 5.7 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, 6 ಜಿಬಿ ರ್ಯಾಮ್‌ ಹಾಗೂ 64 ಜಿಬಿ/128 ಜಿಬಿ ಸ್ಟೋರೆಜ್‌ ಸಾಮರ್ಥ್ಯ ಹೊಂದಿದೆ.

ಟೆಲಿಫೋಟೋ ಲೆನ್ಸ್‌ ಇದೆ
ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್‌ ಕೆಮರಾ ಇದ್ದು ಡ್ಯುಎಲ್‌ ಕೆಮರಾ, ಟೆಲಿಫೋಟೋ ಸೌಕರ್ಯ ಇದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಕೆಮರಾ ಕೊಡಲಾಗಿದೆ.

56 ಸಾವಿರ ರೂ.
ಪಿಕ್ಸೆಲ್‌ 4 ಸ್ಮಾರ್ಟಫೋನಿನ ಅಂದಾಜು ದರ 64ಜಿಬಿ ವೇರಿಯಂಟ್‌ಗೆ 56,000 ರೂ.ಗಳಿಂದ ಆರಂಭವಾಗಲಿದ್ದು, 128ಜಿಬಿ ವೇರಿಯಂಟ್‌ ಸ್ಮಾರ್ಟ್‌ಪೋನ್‌ನ ಬೆಲೆ 64,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next