ಹೊಸದಿಲ್ಲಿ: ಸ್ಪರ್ಧೆಗೆ ನಿರ್ಬಂಧ ಒಡ್ಡಿದ ಕಾರಣದಿಂದಾಗಿ ತನ್ನ ಆ್ಯಪ್‌ಗ್ ಳಿಗೆ ಆಪಾರ ನಷ್ಟವಾ ಗಿದ್ದು, 3 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಜೆಕ್ ರಿಪಬ್ಲಿಕ್‌ನ ಪ್ರಮುಖ ವೆಬ್ ಸರ್ಚ್ ಸಂಸ್ಥೆಯೊಂದು ಗೂಗಲ್‌ಗೆ ಬೇಡಿಕೆ ಇಟ್ಟಿದೆ.
ಆ್ಯಪ್‌ಗಳ ಇನ್‌ಸ್ಟಾಲ್‌ಗೆ ವೇದಿಕೆ ಆಗಿರುವ ಜೆಕ್ ಗಣ ರಾಜ್ಯದ “ನ್ಜ್’ ಸರ್ಚ್ ಎಂಜಿನ್ ಸಂಸ್ಥೆ ಈ ಆರೋಪ ಹೊರಿಸಿದೆ. ಆ್ಯಂಡ್ರಾಯ್ಡ ಆಪರೇಟಿಂಗ್ ಸಿಸ್ಟಂನಲ್ಲಿ ಗೂಗಲ್ ಪ್ಲೇಸ್ಟೋರ್‌ನಂತೆ, “ಸೆನ್ಜ್’ ಕೂಡ ಲಭ್ಯವಿದೆ.
ಆರೋಪ ಏನು?: “ಹಲವು ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿ ಗೂಗಲ್ ತನ್ನ ಪ್ಲೇಸ್ಟೋರ್, ಗೂಗಲ್ ಮ್ಯಾಪ್‌ಗ್ಳನ್ನು ಮುಂಚಿತವಾಗಿ ಅಳವಡಿಸಿದೆ. ಇದು ಯುರೋಪಿಯನ್ ಒಕ್ಕೂಟದ ಆ್ಯಂಟಿಟ್ರಸ್ಟ್ ನಿಯಮಗಳ ಸ್ಪಷ್ಟ ಉಲ್ಲಂಘನೆ. ಆ್ಯಂಡ್ರಾಯ್ಡ ಒಳಗೊಂಡ ಮೊಬೈಲ್ ಡಿವೈಸ್ ಮೂಲಕ ನಮ್ಮ ಆ್ಯಪ್‌ಗ್ಳನ್ನು ಹಂಚಲು ಗೂಗಲ್ ನಿರಂತರವಾಗಿ ಅಡ್ಡಪಡಿಸಿದೆ’ ಎಂದು ಜೆಕ್ ಸಂಸ್ಥೆ ಆರೋಪಿಸಿದೆ.
ಗೂಗಲ್ ಹೇಳುವುದೇನು?
“ಆ್ಯಂಡ್ರಾಯ್ಡ ತನ್ನ ಬಳಕೆದಾರರಿಗೆ ತಾವು ಬಯಸಿದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಲು ಅಪಾರ ಆಯ್ಕೆ ನೀಡುತ್ತದೆ. ಇದರಲ್ಲಿ ನಮ್ಮ ಹಸ್ತಕ್ಷೇಪವೇನೂ ಇಲ್ಲ’ ಎಂದು ಗೂಗಲ್ ಸ್ಪಷ್ಟಪಡಿಸಿದೆ.