Advertisement

ಗೂಗಲ್‌ ಪೇನಲ್ಲಿಯೂ ಉದ್ಯೋಗಾವಕಾಶ ಮಾಹಿತಿ

10:31 AM Sep 20, 2019 | Sriram |

ಹೊಸದಿಲ್ಲಿ: ಅಂತರ್ಜಾಲ ದೈತ್ಯ ಗೂಗಲ್‌ ಸಂಸ್ಥೆ, ಇನ್ನು ಉದ್ಯೋಗಾವಕಾಶ ಮಾಹಿತಿಯನ್ನು ಗೂಗಲ್‌ ಪೇ ಆ್ಯಪ್‌ನಲ್ಲೂ ನೀಡುವುದಾಗಿ ಘೋಷಣೆ ಮಾಡಿದೆ. ಈಗಾಗಲೇ ಅದು ತನ್ನ ಸರ್ಚ್‌ ಎಂಜಿನ್‌ನಲ್ಲಿ ಮಾತ್ರ ಇಂತಹ ಸೌಲಭ್ಯ ನೀಡುತ್ತಿತ್ತು. ಇದೇ ಮಾಹಿತಿಗಳು ಇನ್ನು ಆ್ಯಂಡ್ರಾಯಿಡ್‌ ಮೊಬೈಲ್‌ನ ಗೂಗಲ್‌ ಪೇ ಆಪ್‌ನಲ್ಲೂ ಸಿಗಲಿದೆ.

Advertisement

24/7, ಸ್ವಿಗ್ಗಿ ಹಾಗೂ ಡಂಝೊ ಕಂಪೆನಿಗಳ ಸಹಭಾಗಿತ್ವದಲ್ಲಿ ಉದ್ಯೋಗ ಅನ್ವೇಷಿಗಳಿಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಸದ್ಯ ಒಟ್ಟು 25 ಸಂಸ್ಥೆಗಳೊಂದಿಗೆ ಕೈಜೋಡಿಸಲಾಗಿದ್ದು, ಗೂಗಲ್‌ ಪೇ ಬಳಕೆದಾರರಾಗಿರುವ ಸೆಸರ್‌ ಸೇನಾಗುಪ್ತ, ಜನರಲ್‌ ಮ್ಯಾನೇಜರ್, ಪೇಮೆಂಟ್ಸ್‌ , ನೆಕ್ಸ್ಟ್ ಬಿಲಿಯನ್‌ ಕಂಪೆನಿಗಳೂ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲು ಕೈ ಜೋಡಿಸಲಿವೆ. ಇದರೊಂದಿಗೆ ಯಾರು ಬೇಕಾದರೂ ಉದ್ಯೋಗಾವಕಾಶ ಕುರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಅವಕಾಶವಿದೆ ಎಂದು ಗೂಗಲ್‌ ಹೇಳಿದೆ.

ಉದ್ಯೋಗ ಆಕಾಂಕ್ಷಿಗಳು ತಮ್ಮ ನಿರೀಕ್ಷೆಯ ಕೆಲಸವನ್ನು ಸರ್ಚ್‌ ಬಾರ್‌ ಅಲ್ಲಿ ನಮೂದಿಸಿಬೇಕು. ಆಗ ನಿಮ್ಮ ಬೇಡಿಕೆಗೆ ಹೊಂದಾಣಿಕೆಯಾಗುವ ಉದ್ಯೋಗ ಅವಕಾಶಗಳನ್ನು ಗೂಗಲ್‌ ಸೂಚಿಸುತ್ತದೆ. ಈ ಪ್ರಕ್ರಿಯೆಗೆ ಕೃತಕ ಬುದ್ಧಿಮತ್ತೆಯ ಸಾಫ್ಟ್ವೇರ್‌ ಅಳವಡಿಸಲಾಗಿದೆ.

ಸದ್ಯ ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ ಉದ್ಯೋಗ ಅವಕಾಶಗಳ ಮಾಹಿತಿಯನ್ನು ಮಾತ್ರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆಯ ಮಾಹಿತಿಗಳು ಲಭ್ಯವಾಗಲಿವೆ. ಇದರೊಂದಿಗೆ ಮಾರಾಟಗಾರರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದು, ತಮ್ಮ ಉತ್ಪನ್ನಗಳನ್ನು ಈ ವೇದಿಕೆಯ ಮೂಲಕ ಮಾರಾಟ ಮಾಡಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next