Advertisement
ಹೌದು, ಬೋಧನಾ ಮತ್ತು ಕಲಿಯುವ ಅನುಭವದಲ್ಲಿ ಪರಿವರ್ತನೆ ತರಲು ಕೆ-12 ತರಗತಿಗಳ ಶಾಲಾ-ನಂತರ ಮ್ಯಾತ್ ಮತ್ತು ಕೋಡಿಂಗ್ ಪ್ರೋಗ್ರಾಂ, “ಕ್ಯೂಮ್ಯಾತ್” ಗೂಗಲ್ ಫಾರ್ ಎಜುಕೇಷನ್’ನೊಂದಿಗೆ ಕೈಜೋಡಿಸಿದೆ.
Related Articles
Advertisement
ಇನ್ನು, ಕ್ಯೂ ಮ್ಯಾತ್ ನ ಸಂಸ್ಥಾಪಕ ಮತ್ತು ಸಿಇಒ ಮನನ್ ಖುರ್ಮಾ ಈ ಪಾಲುದಾರಿಕೆಯ ಬಗ್ಗೆ ಮಾತನಾಡಿ, ‘ಗೂಗಲ್ ಫಾರ್ ಎಜುಕೇಷನ್’ ನೊಂದಿಗಿನ ನಮ್ಮ ಸಹಭಾಗಿತ್ವವು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಪಡೆಯಲು ಮತ್ತು ನೈಜ-ಪ್ರಪಂಚದ ಕೌಶಲ್ಯಗಳನ್ನು ಕೇಂದ್ರೀಕರಿಸುವ ಸಾಮರ್ಥ್ಯಗಳನ್ನು ಬೆಳೆಸಲು ಅವಕಾಶವನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಗಣಿತದಲ್ಲಿ ಉತ್ತಮ ಜ್ಞಾನ ಪಡೆಯುವುದಕ್ಕೆ ಸಹಾಯ ಮಾಡುತ್ತದೆ. “ಗಣಿತವನ್ನು ಮಕ್ಕಳು ಸ್ವಾಭಾವಿಕವಾಗಿ ಕಲಿಯಲು ಅಗತ್ಯವಿರುವ ಕಲಿಕಾ ವೇದಿಕೆಗಳು, ಕಲಿಕೆಯ ನಿರ್ವಹಣಾ ವ್ಯವಸ್ಥೆಗಳು, ಸ್ಮಾರ್ಟ್ ತರಗತಿಗಳು ಈ ಪ್ರೋಗ್ರಾಂನಲ್ಲಿವೆ ಎಂದಿದ್ದಾರೆ.
‘ಗೂಗಲ್ ಫಾರ್ ಎಜುಕೇಷನ್’ ನಲ್ಲಿ ಮೂರು ಗಂಟೆಗಳ ಅವಧಿಯ ಪರೀಕ್ಷೆ ಇರಲಿದ್ದು, ಕ್ಯೂ ಮ್ಯಾತ್ ನ ಕೋಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗೂಗಲ್ ನ ಸಿಎಸ್, ಮೊದಲ ಪಠ್ಯಕ್ರಮವನ್ನು ಕಲಿಸಲಾಗುತ್ತದೆ.
ಇದನ್ನೂ ಓದಿ : ಅನೈತಿಕ ಸಂಬಂಧ: ತಿಳಿ ಹೇಳಿದರೂ ಸರಿ ಹೋಗದ ವ್ಯಕ್ತಿಯನ್ನು ಹಲ್ಲೆ ಮಾಡಿ ಕೊಲೆಗೈದ ಸಂಬಂಧಿಕರು!