Advertisement
ಸ್ಮಾರ್ಟ್ ಫೋನಿನ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಚಿಕ್ಕಮಕ್ಕಳಿಂದ ಹಿಡಿದು ನೂರು ವರ್ಷದ ವೃದ್ಧರ ಕೈಯಲ್ಲೂ ಮೊಬೈಲ್ ಬೇಕೇ ಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಪೇಪರ್ ಫೋನ್ ಎಂಬುದು ಮೊಬೈಲ್ ಗೆ ಪರ್ಯಾಯವಾಗಿ ಬಳಸಲ್ಪಡುವ ಒಂದು ಹಾಳೆಯಷ್ಟೇ. ಇದರ ಉದ್ದೇಶವೆಂದರೆ ಜನರನ್ನು ಸಾಧ್ಯವಾದಷ್ಟು ಸ್ಮಾರ್ಟ್ ಫೋನ್ ಗಳಿಂದ ದೂರ ಮಾಡುವುದು. ಒಂದು ತುಂಡು ಪೇಪರ್ ನಂತಿರುವ ಫೋನ್ ಅನ್ನು 8 ಬಾರಿ ಮಡಚುವುದಕ್ಕೆ ಅವಕಾಶ ನೀಡುವಂತಹ ಪೇಪರ್ ಫೋನ್ ತಯಾರಿಯಲ್ಲಿ ಗೂಗಲ್ ನ ಕ್ರಿಯೇಟಿವ್ ಲ್ಯಾಬ್ ತೊಡಗಿದೆ.
Related Articles
Advertisement
ಪೇಪರ್ ಫೋನ್ ಜೊತೆಗೆ ಗೂಗಲ್ ಇನ್ನೂ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಅನ್ ಲಾಕ್ ಕ್ಲಾಕ್( ನೀವು ಎಷ್ಟು ಬಾರಿ ಫೋನ್ ನ್ನು ಅಲ್ ಲಾಕ್ ಮಾಡುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ), ವಿ-ಫ್ಲಿಪ್( ಇದರಲ್ಲಿ ಗುಂಪಿನ ಎಲ್ಲಾ ಸದಸ್ಯರು ಒಟ್ಟಿಗೆ ಫೋನ್ ನ್ನು ಆಫ್ ಮಾಡಲು ಅವಕಾಶವಿರುತ್ತದೆ), ಇತ್ಯಾದಿ ಪ್ರೊಜೆಕ್ಟ್ ಗಳನ್ನು ಮಾಡಲಾಗುತ್ತಿದೆ. ಗೂಗಲ್ ಜೊತೆಗೆ ಇನ್ನೂ ಹಲವು ಸಿಲಿಕಾನ್ ವ್ಯಾಲಿ ಕಂಪೆನಿಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಪ್ರೊಡಕ್ಟ್ ಗಳ ಬಿಡುಗಡೆಗೆ ತಯಾರಿ ನಡೆಸುತ್ತಿವೆ. ಪ್ರಾಥಮಿಕ ಮಾಹಿತಿ ಪ್ರಕಾರಈ ಫೋನ್ ನಲ್ಲಿನಲ್ಲಿ ಕ್ಯಾಮಾರ, ಕರೆ ಸೌಲಭ್ಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಕೇವಲ ಅಕ್ಷರಗಳನ್ನು ಮಾತ್ರ ಡಿಜಿಟಲ್ ರೂಪದಲ್ಲಿ ನೋಡಬಹುದು. ಮುಂದಿನ ವರುಷಗಳಲ್ಲಿ ಎಲ್ಲಾ ಸೌಲಭ್ಯಗಳು ಬರಲಿವೆ ಎಂದು ಸುದ್ದಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಮುಂದಿನ ವರ್ಷಗಳಲ್ಲಿ ಜಗತ್ತೇ ನಿಬ್ಬೆರಗಾಗುವಂತಹ ತಂತ್ರಜ್ಞಾನಗಳು ಅವಿಷ್ಕಾರಗೊಳ್ಳಲಿದೆ. ಇದಕ್ಕೆ ಗೂಗಲ್ ಈಗಾಗಲೇ ಮುನ್ನುಡಿ ಬರೆಯುತ್ತಿದೆ. ಈಗಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ ಸರಾಸರಿ 500 ಗ್ರಾಂ ತೂಕವಂತೂ ಇದ್ದೇ ಇರುತ್ತದೆ. ಇನ್ನು ಪೇಪರ್ ನಂತಿರುವ ಪೋನ್ ಗಳು ಬಂದರಂತೂ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆಗಳಾಗುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.