Advertisement
ಡಾರ್ಕ್ ಮೂಡ್ ಸೌಲಭ್ಯ ಲಭ್ಯಹೊಸ ಗುಣಲಕ್ಷಣಗಳನ್ನು ಪರಿಚಯಿಸಲಿರುವ ಗೂಗಲ್ ಸುದ್ದಿ ಪ್ರಕಾಶಕರಿಗಾಗಿ ನೂತನ ಸಾಧನವೊಂದನ್ನು ಹೊರತರಲಿದ್ದು, ಆಂಡ್ರಾಯ್ಡ ಮೊಬೈಲ್‌ನಲ್ಲಿ ಇತರೆ ಯಾವುದೇ ವೆಬ್ ಪುಟವನ್ನು ಡಾರ್ಕ್ ಮೋಡ್‌ಗೆ ಪರಿವರ್ತಿಸಲು ಒಪೇರಾ ಅನುಮತಿ ನೀಡಲಿದೆ.
ಗೂಗಲ್: ರಿಯಲ್‌ಟೈಮ್ ಕಂಟೆಂಟ್ ಇನ್‌ಸೈಟ್ಸ್ ಎಂಬ ಹೊಸ ಫೀಚರ್ ಅನ್ನು ಗೂಗಲ್ ಪರಿಚಯಿಸಲಿದ್ದು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದ ಹೊಸ ಲಕ್ಷಣಗಳನ್ನು ಒಳಗೊಂಡಿದೆ. ಸುದ್ದಿ ಪ್ರಕಾಶಕರಿಗೆ ಆ ಫೀಚರ್ ಉಪಯುಕ್ತವಾಗಲಿದ್ದು, ಟ್ರೆಂಡಿಂಗ್ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಕಾಶಕರಿಗೆ ಹೆಚ್ಚು ನೈಜ-ಸಮಯದ ಅಂಕಿ-ಅಂಶವನ್ನು ಇದು ಒದಗಿಸುತ್ತದೆ ಎಂದು ಗೂಗಲ್ ಅಧಿಕೃತ ಬ್ಲಾಗ್ ತಿಳಿಸಿದೆ. ಸುದ್ದಿ ತಯಾರಕರಿಗೆ ಓದುಗರಿಗೆ ಯಾವ ಲೇಖನಗಳು ಹೆಚ್ಚು ಇಷ್ಟವಾಗಲಿವೆ ಎಂಬುದನ್ನು ಗುರುತಿಸಲು ಆರ್‌ಸಿಐ ನೆರವಾಗಲಿದ್ದು, ಟ್ರೆಂಡಿಂಗ್ ವಿಷಯಗಳೊಂದಿಗೆ ಓದುಗರ ಆಸಕ್ತಿಗಳನ್ನು ಅರಿತುಕೊಂಡು ಸುದ್ದಿಗಳು ಬರುತ್ತಿದ್ದಂತೆ ವಿಷಯವನ್ನು ರಚಿಸುವುದು ಇದರ ಉದ್ದೇಶವಾಗಿದೆ. ಒಪೇರಾ:ವೆಬ್ ಪುಟಗಳು ಯಾವುದೇ ಆಗಿರಲಿ, ಆದರೆ ಅದನ್ನು ಬಳಸುವಾಗ ನಿಮ್ಮ ಕಣ್ಣುಗಳಿಗೆ ಒತ್ತಡ ಕಡಿಮೆ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೊಸ ನೈಟ್ ಮೋಡ್ ಲಕ್ಷಣದೊಂದಿಗೆ ಆಂಡ್ರಾಯ್ಡ್ ಬ್ರೌಸರ್ ಒಪೇರಾದ ಹೊಸ ಆವೃತ್ತಿ-55 ಬಂದಿದೆ.ಈ ಹೊಸ ಆವೃತ್ತಿಯು ಬಿಳಿ ವೆಬ್ ಪುಟಗಳನ್ನು ಡಾರ್ಕ್ ಆಗಿ ಪರಿವರ್ತಿಸಲು ಅವಕಾಶವಿದೆ. ಬಳಕೆದಾರರು ಬ್ರೌಸರ್‌ನ ಬಣ್ಣವನ್ನು ಸೆಟಿಂಗ್ ಅಲ್ಲಿ ಹೊಂದಿಸಬಹುದು. ಅಲ್ಲದೇ ಮೊಬೈಲ್ ಅಲ್ಲಿರುವ ನೀಲಿ ಬೆಳಕನ್ನು ತಡೆಹಿಡಿಯಲು ಸೂಪರ್-ಡಾರ್ಕ್ ಮೋಡ್ ಸಹ ಇರಲಿದೆ ಎಂದು ಒಪೇರಾ ಅಧಿಕೃತ ಬ್ಲಾಗ್ ತಿಳಿಸಿದೆ.