ನವದೆಹಲಿ: ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಹೊರತಂದಿದೆ. ಆ ಮೂಲಕ ಬಳಕೆದಾರರು ಕಳೆದ 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು “ಡಿಲೀಟ್ ಲಾಸ್ಟ್ 15 ಮಿನಿಟ್” ಎಂದೇ ಕರೆಯಲಾಗಿದೆ.
ಗೂಗಲ್ ಸಂಸ್ಥೆ ಹೇಳುವಂತೆ “ಕಳೆದ ಹಲವು ವರ್ಷಗಳಿಂದ ಬಳಕೆದಾರರು ಈ ಫೀಚರ್ ಗೆ ಬೇಡಿಕೆಯಿರಿಸಿದ್ದರು. ಆದರೆ ಕ್ಲಿಯರ್ ಹಿಸ್ಟರಿ ಆಯ್ಕೆ ಮಾತ್ರ ಇಲ್ಲಿಯವರೆಗೂ ಚಾಲ್ತಿಯಲ್ಲಿತ್ತು. ಇನ್ನು ಮುಂದೆ “ ಡಿಲೀಟ್ ಲಾಸ್ಟ್ 15 ಮಿನಿಟ್” ಆಯ್ಕೆಯೂ ಲಭ್ಯವಾಗಲಿದೆ” ಎಂದಿದೆ.
ಹೊಸ ಆಯ್ಕೆಯ ಮೂಲಕ ಗೂಗಲ್ ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಟ್ವಿಟ್ಟರ್ ‘ವೇರಿಫಿಕೇಶನ್ ಬ್ಯಾಡ್ಜ್’ ಪುನರಾರಂಭ; ಯಾರೆಲ್ಲಾ ಅರ್ಹರು ? ಮಾರ್ಗಸೂಚಿಗಳೇನು ?
ಈ ಫೀಚರ್ ಬಳಸುವುದು ಹೇಗೆ ?
- ಗೂಗಲ್ ಅಪ್ಲಿಕೇಶನ್ ತೆರೆದು ಅದರಲ್ಲಿರುವ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿದಾಕ್ಷಣ ಸೆಟ್ಟಿಂಗ್ ಮೆನು ಕಾಣಿಸಿಕೊಳ್ಳುತ್ತದೆ.
- ಸೆಟ್ಟಿಂಗ್ ನಲ್ಲಿ ಡಿಲೀಟ್ ಲಾಸ್ಟ್ 15 ಮಿನಿಟ್ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಟ್ಯಾಪ್ ಮಾಡಿದಾಕ್ಷಣ ಸರ್ಚ್ ಹಿಸ್ಟರಿಗಳು ಡಿಲೀಟ್ ಆಗುತ್ತವೆ.
clear
ಇದು ಮಾತ್ರವಲ್ಲದೆ ಗೂಗಲ್ ‘ಕಳೆದ ಒಂದು ಗಂಟೆ’ ಮತ್ತು ‘ಕಳೆದ ಒಂದು ದಿನ’ದ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಕಲ್ಪಿಸಿದೆ. ಆದರೆ ಇದು ಪ್ರಸ್ತುತ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.
ಗೂಗಲ್ ಕ್ರೋಮ್ ನಲ್ಲಿ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ ?
ಗೂಗಲ್ ಕ್ರೋಮ್ ನಲ್ಲಿ “ಮೋರ್” ಎಂಬ ಆಯ್ಕೆಯು ಕಾಣಿಸುತ್ತದೆ. ಇದರಲ್ಲಿ ಹಿಸ್ಟರಿ ಎಂಬ ಫೀಚರ್ ಇದ್ದು, ಇದರ ಮೂಲಕ ಸುಲಭವಾಗಿ ‘ಕ್ಲಿಯರ್ ಬ್ರೌಸಿಂಗ್ ಡೇಟಾ’ ಮಾಡಬಹುದು.
ಇದನ್ನೂ ಓದಿ: ನೀವು ನಿಮ್ಮ ಸ್ಮಾರ್ಟ್ ಫೋನ್ ನನ್ನು ಮಾರಾಟ ಮಾಡ್ತಿದ್ದೀರಾ? ಹಾಗಾದ್ರೇ ಈ ಲೇಖನ ಓದಲೇಬೇಕು..!