ಕೋವಿಡ್ ಸಂಬಂಧಿತ ಪ್ರಯಾಣ ನಿರ್ಬಂಧಗಳ ಕುರಿತು ಬಳಕೆದಾರರನ್ನು ಎಚ್ಚರಿಸಲು ಮತ್ತು ನಿರ್ದಿಷ್ಟ ಸ್ಥಳದಲ್ಲಿ ವೈರಸ್ ಪ್ರಭಾವ ಹೇಗಿದೆ ಎಂಬ ಮಾಹಿತಿ ನೀಡಲು ಈ ಫೀಚರ್ ರೂಪಿಸಲಾಗಿದ್ದು, ಪ್ರವಾಸ ಗಳನ್ನು ಉತ್ತಮವಾಗಿ ಯೋಜಿಸಲು ಇದು ನೆರವಾಗುತ್ತದೆ ಎಂದಿದೆ.
ಮಾತ್ರವಲ್ಲದೆ ಈ ಫೀಚರ್ ನೆರವಿನಿಂದ ನಿರ್ದಿಷ್ಟ ಸಮಯದಲ್ಲಿ ರೈಲು ನಿಲ್ದಾಣ ಜನದಟ್ಟಣೆಯಿಂದ ಕೂಡಿದೆಯೇ ? ಅಥವಾ ನಿರ್ದಿಷ್ಟ ಮಾರ್ಗದಲ್ಲಿ ಬಸ್ಸುಗಳು ಸೀಮಿತ ವೇಳಾಪಟ್ಟಿಯಲ್ಲಿ ಚಲಿಸುತ್ತಿದೆಯೇ ಎಂದು ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಗೂಗಲ್ ಹೇಳಿದೆ.
ಅರ್ಜೆಂಟೀನಾ, ಫ್ರಾನ್ಸ್, ಭಾರತ, ನೆದರ್ಲ್ಯಾಂಡ್ಸ್, ಯುನೈಟೆಡ್ ಸ್ಟೇಟ್ಸ್, ಯುಕೆ ಸೇರಿದಂತೆ ಇತರ ದೇಶಗಳಲ್ಲಿ ಈ ಫೀಚರ್ ಅನ್ನು ಬಳಕೆಗೆ ತರಲಾಗುವುದು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಮಾತ್ರವಲ್ಲದೆ ಈ ಹೊಸ ಫೀಚರ್ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್ ನಿಂದ ಪ್ರಾರಂಭವಾಗುವ ಕೋವಿಡ್-19 ಚೆಕ್ ಪೋಸ್ಟ್ ಗಳ ವಿವರಗಳು ಮತ್ತು ರಾಷ್ಟ್ರೀಯ ಗಡಿಗಳನ್ನು ದಾಟಲು ಇರುವ ನಿರ್ಬಂಧಗಳ ಮಾಹಿತಿಯನ್ನು ಒಳಗೊಂಡಿರುತ್ತದೆ .
ಕಳೆದ ಮೂರು ತಿಂಗಳಿನಿಂದ, ಕಂಪನಿಯು 131 ದೇಶಗಳಲ್ಲಿನ ಶತಕೋಟಿ ಗೂಗಲ್ ಬಳಕೆದಾರರ ಫೋನ್ ಗಳಿಂದ ಸ್ಥಳ ಡೇಟಾವನ್ನು ವಿಶ್ಲೇಷಿಸಿ ಈ ಕ್ರಮವನ್ನು ಕೈಗೊಂಡಿದೆ. ಗೂಗಲ್ ತನ್ನ ಸರ್ಚ್ ಆ್ಯಡ್ ಬ್ಯುಸಿನೆಸ್ ಗೆ ಬಿಲಿಯನ್ ಗಟ್ಟಲೇ ಹೂಡಿಕೆ ಮಾಡಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ
Advertisement