Advertisement

ಗೂಗಲ್‌ ಮ್ಯಾಪ್‌ನಲ್ಲಿ ಕನ್ನಡ ಸೇರಿದಂತೆ ದೇಶದ 10 ಭಾಷೆಗಳಲ್ಲಿ ಸ್ಥಳಗಳ ಹೆಸರು

11:01 PM Jan 28, 2021 | Team Udayavani |

ನವದೆಹಲಿ: ಸ್ಥಳೀಯರಿಗೆ ನೆರವಾಗುವ ನಿಟ್ಟಿನಲ್ಲಿ ಗೂಗಲ್‌ ಮ್ಯಾಪ್‌ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇಂಗ್ಲಿಷ್‌ನಲ್ಲಿರುವ ಎಲ್ಲ ಸ್ಥಳಗಳ ಹೆಸರನ್ನು ಕನ್ನಡವೂ ಸೇರಿದಂತೆ ದೇಶದ 10 ಭಾಷೆಗಳಿಗೆ ಲಿಪ್ಯಂತರ ಮಾಡಿದೆ.

Advertisement

ಅಂದರೆ ಇಂಗ್ಲಿಷ್‌ ಲಿಪಿಯಲ್ಲಿ ಕೆಂಪೇಗೌಡ ಅಂತ ಇರುವುದನ್ನು ಯಥಾವತ್‌ ಕನ್ನಡದಲ್ಲೂ ಲಭ್ಯವಾಗುವಂತೆ ಬದಲಾವಣೆ ಮಾಡಿದೆ. ಇಲ್ಲಿ ಅನುವಾದ ಮಾಡಿಲ್ಲ. ಕೇವಲ ಇಂಗ್ಲಿಷ್‌ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದಂತೆ ಬದಲಾವಣೆ ಮಾಡಲಾಗಿದೆ.

ಇಂಗ್ಲಿಷ್‌ನಲ್ಲಿ ಸ್ಥಳಗಳ ಹೆಸರನ್ನು ಬರೆದರೆ ಸಲೀಸಾಗಿ ಮ್ಯಾಪ್‌ನಲ್ಲಿ ಪತ್ತೆಯಾಗುತ್ತಿತ್ತು. ಅದನ್ನೇ ಕನ್ನಡದಲ್ಲಿ ಬರೆಯಲು ಹೋದರೆ ಆ ಸ್ಥಳವೇ ಸಿಗುತ್ತಿರಲಿಲ್ಲ. ಉದಾಹರಣೆಗೆ ಕೆಂಪೇಗೌಡ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ (ಕಿಮ್ಸ್‌) ಹೆಸರನ್ನು ಕನ್ನಡದಲ್ಲಿ ಬರೆದರೆ, ಬೇರೆ ಯಾವುದೋ ಜಾಗವನ್ನು ಅದು ತೋರಿಸುತ್ತಿತ್ತು. ಈಗ ಕೆಂಪೇಗೌಡ ಅಂತ ಬರೆಯಲು ಹೋದರೆ ತನ್ನಿಂತಾನೇ ಇಂಗ್ಲಿಷ್‌ನಲ್ಲಿನ ಹೆಸರು, ಕನ್ನಡಕ್ಕೆ ಲಿಪ್ಯಂತರಗೊಳ್ಳುತ್ತಗೊಂಡು ಸ್ಥಳ ಸಿಗುತ್ತದೆ.

ಇದನ್ನೂ ಓದಿ:ಫೆಬ್ರವರಿ ಅಂತ್ಯದವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ

Advertisement

Udayavani is now on Telegram. Click here to join our channel and stay updated with the latest news.

Next