Advertisement

22 ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿ ಗೂಗಲ್‌ ಮ್ಯಾಪ್‌ನಿಂದ ಪತ್ತೆ

10:01 AM Sep 15, 2019 | Team Udayavani |

ವಾಷಿಂಗ್ಟನ್‌: ಅಮೆರಿಕದ ಫ್ಲೋರಿಡಾದಲ್ಲಿ 22 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಪ್ರಕರಣವನ್ನು ಭೇದಿಸಲು ಗೂಗಲ್‌ ಮ್ಯಾಪ್‌ ನೆರವಾಗಿದೆ.

Advertisement

1997ರ ನ. 7ರ ರಾತ್ರಿ, ಫ್ಲೋರಿಡಾದ ನೈಟ್‌ಕ್ಲಬ್‌ ಒಂದರಿಂದ ಮನೆ ಕಡೆ ಕಾರಿನಲ್ಲಿ ತೆರಳುತ್ತಿದ್ದ ವಿಲಿಯಮ್‌ ಮಾಲ್ಡ್‌$r ಎಂಬ ವ್ಯಕ್ತಿ, ರಸ್ತೆ ಮಧ್ಯದಲ್ಲೇ ಏಕಾಏಕಿ ನಾಪತ್ತೆಯಾಗಿದ್ದ. ನಾಪತ್ತೆಯಾಗುವ ಮುನ್ನ, ತನ್ನ ಪ್ರೇಯಸಿಯ ಮನೆಗೆ ಫೋನಾಯಿಸಿ, ತಾನು ಆಕೆಯ ಮನೆಗೆ ಬರುತ್ತಿರುವುದಾಗಿಯೂ ಹೇಳಿದ್ದ. ಆದರೆ, ಆತ ಮನೆಗೆ ಬರದೆ, ಎಲ್ಲಿಯೂ ಹೋಗದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಯಾವುದೇ ಸುಳಿವು ಸಿಗದ ಕಾರಣ ಪೊಲೀಸರು ಪ್ರಕರಣವನ್ನು ಅಂತ್ಯಗೊಳಿಸಿದ್ದರು.

ಆ ಪ್ರೇಯಸಿಯ ನೆರೆ ಮನೆಯಾತನೊಬ್ಬ ಕಳೆದ ತಿಂಗಳ 28ರಂದು, ಗೂಗಲ್‌ ಮ್ಯಾಪ್‌ನ ಉಪಗ್ರಹ ಮಾದರಿಯ ವೀಕ್ಷಣೆಯಲ್ಲಿ ತಾನಿರುವ ಪ್ರದೇಶವನ್ನು ನೋಡುತ್ತಿರುವಾಗ, ತನ್ನ ಪ್ರಾಂತ್ಯಕ್ಕೆ ಆಗಮಿಸುವ ರಸ್ತೆ ಬದಿಯ ಕೆರೆಯೊಂದರಲ್ಲಿ ಕಾರೊಂದು ತೇಲುತ್ತಿರುವುದನ್ನು ಕಂಡು ಚಕಿತನಾಗಿದ್ದ.

ಪೊಲೀಸರ ಸಹಾಯದಿಂದ ಕೆರೆಯಿಂದ ಕಾರು ಮೇಲೆತ್ತಿದಾಗ ಅದರಲ್ಲೊಂದು ಅಸ್ತಿಪಂಜರ ಸಿಕ್ಕಿತು. ಅದರ ಪರೀಕ್ಷೆ ನಡೆಸಿದಾಗ ಅದು 1997ರಲ್ಲಿ ನಾಪತ್ತೆಯಾಗಿದ್ದ ವಿಲಿಯಮ್‌ ಅವರದ್ದೆಂದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next