Advertisement
ಇತ್ತೀಚೆಗೆ ನಡೆದ ಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಈ ವಿಷಯವನ್ನು ಘೋಷಿಸಿರುವುದಾಗಿ ಬ್ಯುಸಿನೆಸ್ ಇನ್ ಸೈಡರ್ (Business Insider) ವರದಿ ಮಾಡಿದೆ. ಗೂಗಲ್ ಸಂಸ್ಥೆಯ ದಕ್ಷತೆ, ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಸೇರಿದಂತೆ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಪಿಚೈ ಸಭೆಯಲ್ಲಿ ವಿವರಿಸಿರುವುದಾಗಿ ವರದಿ ತಿಳಿಸಿದೆ.
Related Articles
Advertisement
ಗೂಗಲ್ ಕಂಪನಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನ ಹರಿಸಿತ್ತು. 2023ರ ಜನವರಿ ನಂತರ ಗೂಗಲ್ ಕಂಪನಿ ಬರೋಬ್ಬರಿ 12,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕೃತಕ ಬುದ್ದಿಮತ್ತೆಯ( Artificial Intelligence) ತೀವ್ರ ಸ್ಪರ್ಧೆಯ ಪರಿಣಾಮ ಗೂಗಲ್ ತನ್ನ ಕಾರ್ಯಕ್ಷಮತೆ ಹೆಚ್ಚಳಕ್ಕೆ ಒತ್ತು ನೀಡಿರುವುದಾಗಿ ತಿಳಿಸಿದೆ.