Advertisement
ಈ ಮೂಲಕ ಕೇಂದ್ರ ತುಳು ಭಾಷೆ ಬಗ್ಗೆ ಇನ್ನೂ ನಿರ್ಧಾರ ತಳೆಯದಿದ್ದರೂ ಗೂಗಲ್ ತುಳು ಭಾಷಿಕರಿಗೆ ಮನ್ನಣೆ ನೀಡಿದೆ. ಈಗ ಆ್ಯಂಡ್ರಾಯಿಡ್ ಮೊಬೈಲ್‌ಗಳಲ್ಲಿನ ಗೂಗಲ್ ಕೀ ಬೋರ್ಡ್ (ಜಿಬೋರ್ಡ್)ನಲ್ಲಿ ಈಗ ತುಳುವನ್ನು ನೇರವಾಗಿ ಟೈಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಸಹಜ ವಾಗಿ ಕರಾವಳಿಗರಿಗೆ ಹರ್ಷ ಮೂಡಿಸಿದೆ. ಈವರೆಗೂ ಜಿಬೋರ್ಡ್‌ನಲ್ಲಿ ಕನ್ನಡ ಟೈಪ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ ಇದೀಗ ಕನ್ನಡದೊಂದಿಗೆ ತುಳುವನ್ನೂ ಕನ್ನಡ ಲಿಪಿಯಲ್ಲೇ ಟೈಪ್ ಮಾಡಬಹುದಾಗಿದೆ.
ವಾಗಿದೆ. ಕರಾವಳಿ ಪ್ರದೇಶದ ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಾಗಿ ತುಳು ಭಾಷಿಕರಿದ್ದು, ಗೂಗಲ್‌ನ ಹೊಸ ಕೀಬೋರ್ಡ್ ಅನು ಕೂಲವನ್ನು ಸ್ವಾಗತಿಸಿದ್ದಾರೆ. ತುಳು ಭಾಷೆಗೆ ಸಂವಿಧಾನ ಮಾನ್ಯತೆ ನೀಡ ಬೇಕೆನ್ನುವುದು ದಶಕಗಳ ಬೇಡಿಕೆಯಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಜಿರೆಗೆ ಆಗಮಿಸಿದ್ದಾಗ ಈ ಬಗ್ಗೆ ವಿಶೇಷ ಮನವಿಯನ್ನೂ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರ ಇನ್ನೂ ನಿರ್ಧಾರ ಕೈಗೊಳ್ಳುವ ಮೊದಲೇ ಗೂಗಲ್ ಭಾಷೆ ಆ್ಯಂಡ್ರಾಯಿಡ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.
Related Articles
Advertisement
ಮೊಬೈಲಲ್ಲಿ ತುಳು ಟೈಪ್ ಮಾಡೋದು ಹೇಗೆ? ನಿಮ್ಮ ಆ್ಯಂಡ್ರಾಯಿಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಜಿಬೋರ್ಡ್ ಅಪ್ಡೆàಟ್ ಮಾಡಿ. ಬಳಿಕ ಮೊಬೈಲ್ ಸೆಂಟ್ಟಿಂಗ್ಸ್‌ಗೆ ಹೋಗಿ“ಲಾಂಗ್ವೇಜ್ ಆ್ಯಂಡ್ ಸಪೋರ್ಟ್’ನಲ್ಲಿ ಜಿಬೋರ್ಡ್‌ನಲ್ಲಿ ಇಂಗ್ಲಿಷ್ ಜತೆಗೆ ತುಳು ಅನ್ನೂ ಸೇರಿಸಿ. ಬಳಿಕ ಟೈಪ್ ವೇಳೆ ನಿಮಗೆ ತುಳು ಕೂಡ ಲಭ್ಯ.