ಹೊಸದಿಲ್ಲಿ : ಇಂಟರ್‌ನೆಟ್ ಶೋಧ ದಿಗ್ಗಜ ಎಂದೇ ವಿಶ್ವಖ್ಯಾತಿ ಪಡೆದಿರುವ ಗೂಗಲ್ ಇಂದು ಸೋಮವಾರ ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ‘ತೇಜ್’ ಬಿಡುಗಡೆ ಮಾಡಿದೆ.
ಗೂಗಲ್ ನ ಈ ತೇಜ್ ಆ್ಯಪ್ ಬಳಸುವ ಗ್ರಾಹಕರು ಸರಕು ಮತ್ತು ಸೇವೆಗಳ ಪಾವತಿಯನ್ನು ಮಾತ್ರವಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ, ಆನ್‌ಲೈನ್ ಮತ್ತು ಆಫ್ಲೈನ್‌ನಲ್ಲಿ ಹಣ ಪಾವತಿಸಬಹುದಾಗಿದೆ.
ಗೂಗಲ್‌ನ ತೇಜ್ ಆ್ಯಪ್, ಎನ್‌ಪಿಸಿಐ ನ ಭೀಮ್ ಆ್ಯಪ್ ನ ಹಾಗೆಯೇ ಇದೆ. ಈ ಆ್ಯಪ್ ಸಿದ್ಧಪಡಿಸುವಲ್ಲಿ ಗೂಗಲ್ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶ್ ಆಫ್ ಇಂಡಿಯಾ ಜತೆಗೂಡಿ ಕೆಲಸ ಮಾಡಿದೆ.
ಗೂಗಲ್ ಪ್ಲೇ ಸ್ಟೋರ್ ಸಂದರ್ಶಿಸಿದರೆ ತೇಜ್ ಆ್ಯಪ್ ಅಲ್ಲಿ ಲಭ್ಯವಿರುತ್ತದೆ. ತೇಜ್ ಬಹುತೇಕ ಎಲ್ಲ ಪ್ರಮುಖ ಭಾರತೀಯ ಬ್ಯಾಂಕ್‌ಗಳ ಜತೆಗೆ ವ್ಯವಹರಿಸುತ್ತದೆ ಮತ್ತು ಈಗ ಚಾಲ್ತಿಯಲ್ಲಿರುವ ಹೆಚ್ಚಿನ ಸ್ಮಾರ್ಟ್ ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
ತೇಜ್ ಆ್ಯಪ್, ಇಂಗ್ಲಿಷ್, ಹಿಂದಿ, ಬಂಗಾಲಿ, ಗುಜರಾತಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಯನ್ನು ಬಳಸುತ್ತದೆ.