ವಾಷಿಂಗ್ಟನ್: “ಸರ್ಚ್ ಎಂಜಿನ್ ಕ್ಷೇತ್ರದಲ್ಲಿ ಗೂಗಲ್ ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಕುತಂತ್ರಗಳನ್ನು ಅನುಸರಿಸುತ್ತಿದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಗಂಭೀರ ಆರೋಪ ಮಾಡಿದ್ದಾರೆ. ಇದು ಐಟಿ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ವಾಷಿಂಗ್ಟನ್ ಡಿಸಿ ನ್ಯಾಯಾಲಯ ದಲ್ಲಿ ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ವಿರುದ್ಧದ ಅರ್ಜಿಯ ವಿಚಾರಣೆ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಗೂಗಲ್ ಕೆಲವು ಕಂಪೆನಿಗಳಿಗೆ ಕೋಟ್ಯಂತರ ಡಾಲರ್ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಅಮೆರಿಕ ನ್ಯಾಯಾಂಗ ಇಲಾಖೆಯು ವಿಚಾರಣೆ ನಡೆಸುತ್ತಿದೆ.
“ಮಾರುಕಟ್ಟೆಯಲ್ಲಿ 2009ರಿಂದ ಗೂಗಲ್ ವಿರುದ್ಧ ತನ್ನ ಸ್ಥಾನ ಸೃಷ್ಟಿಸಿಕೊಳ್ಳಲು ಮೈಕ್ರೋಸಾಫ್ಟ್ನ ಬಿಂಗ್ ಯತ್ನಿಸುತ್ತಲೇ ಇದೆ. ಆದರೆ ಕಂಪೆನಿಗಳೊಂದಿಗೆ ಒಳ ಒಪ್ಪಂದದಿಂದಾಗಿ, ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿರುವ ಗೂಗಲ್ ಎದುರು ಸ್ಪರ್ಧಿಸುವುದು ಅಸಾಧ್ಯವಾಗಿದೆ. ಎಲ್ಲ ಮೊಬೈಲ್‌ಗಳು ಮತ್ತು ಕಂಪ್ಯೂಟರ್‌ಗಳಿಗೆ ಸರ್ಚ್ ಎಂಜಿನ್ ಆಗಿ ಗೂಗಲ್ ನೇರವಾಗಿ ಬರುತ್ತದೆ’ ಎಂದು ಸತ್ಯ ಹೇಳಿದರು.
“ಜಗತ್ತಿನ ಅತೀ ಹೆಚ್ಚು ಬಳಕೆಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ತನ್ನ ಜಾಹೀರಾತುದಾರರು ಮತ್ತು ಬಳಕೆದಾರರಿಗೆ ಹೆಚ್ಚು ಶಕ್ತಿಶಾಲಿ ಎಂದು ಕಾಣಿಸುತ್ತಿದೆ. ಆದರೆ ಅದು ಅನುಸರಿಸುತ್ತಿರುವ ತಂತ್ರಗಳು ಇಡೀ ಕ್ಷೇತ್ರಕ್ಕೇ ಮಾರಕವಾಗಿದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಆರೋಪಿಸಿ¨ªಾರೆ.