Advertisement
ಸಂಘಟನಾತ್ಮಕ ಬದಲಾವಣೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿ ರುವ ಕಾರಣ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕಾಗಿದೆ ಎಂದು ಸಂಸ್ಥೆ ಹೇಳಿದೆ. ಇತ್ತೀಚೆಗಷ್ಟೇ ಗೂಗಲ್ ಮತ್ತು ಮಾತೃಸಂಸ್ಥೆ ಆಲ್ಫಾಬೆಟ್ ವೆಚ್ಚ ಕಡಿತದ ಪ್ರತಿಜ್ಞೆ ಮಾಡಿದ್ದವು. ಸಂಸ್ಥೆಯ 12 ಸಾವಿರ ಉದ್ಯೋಗಿಗಳು ಅಂದರೆ ಸುಮಾರು ಶೇ.6ರಷ್ಟು ಮಂದಿಯನ್ನು ವಜಾ ಮಾಡುವುದಾಗಿ ಕಳೆದ ವರ್ಷ ಗೂಗಲ್ ಹೇಳಿತ್ತು. ಇದರ ಜತೆಗೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಇತ್ತೀಚೆಗೆ ಸಮರ್ಥಿಸಿದ್ದರು.ಕಳೆದ ವರ್ಷ ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ 20,000 ಮಂದಿಯನ್ನು ಕೆಲಸದಿಂದ ಕಿತ್ತುಹಾಕಿತ್ತು. ವಾರದ ಆರಂಭದಲ್ಲಿ ಅಮೆಜಾನ್ ತನ್ನ ಪ್ರೈಮ್ ವೀಡಿಯೋ ಮತ್ತು ಸ್ಟುಡಿಯೋ ಘಟಕ ಗಳಲ್ಲಿದ್ದ ನೂರಾರು ನೌಕರರನ್ನು ಮನೆಗೆ ಕಳುಹಿಸಿದೆ. ಟ್ವಿಜ್‌ನಲ್ಲಿ ಕಾರ್ಯ ನಿರ್ವ ಹಿಸುತ್ತಿರುವ 500 ಮಂದಿಯನ್ನೂ ತೆಗೆದುಹಾಕುವುದಾಗಿಯೂ ಹೇಳಿದೆ.