Advertisement

ಗೂಗಲ್‌ಗೆ ದಂಡ!

11:44 PM Sep 04, 2019 | Sriram |

ವಾಷಿಂಗ್ಟನ್‌: ಕಾನೂನು ಬಾಹಿರವಾಗಿ ಯೂ ಟ್ಯೂಬ್‌ನಲ್ಲಿ ಮಕ್ಕಳಿಂದ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದದ್ದಲ್ಲದೆ, ಆ ಮಾಹಿತಿಗಳನ್ನು ಲಾಭಕ್ಕಾಗಿ ಕಾರ್ಪೊರೇಟ್‌ ಕಂಪೆನಿಗಳಿಗೆ ಮಾರಿಕೊಂಡಿರುವ ಪ್ರಕರಣವೊಂದರಲ್ಲಿ, ಯೂ ಟ್ಯೂಬ್‌ನ ಮಾತೃಸಂಸ್ಥೆ ಗೂಗಲ್‌ಗೆ, 1,224 ಕೋಟಿ ರೂ. ದಂಡ ವಿಧಿಸಲಾಗಿದೆ.

Advertisement

ಈ ದಂಡವನ್ನು ಪಾವತಿಸಿ, ಪ್ರಕರಣವನ್ನು ಸುಖಾಂತ್ಯಗೊಳಿಸುವಂತೆ ಅಮೆರಿಕದ ಫೆಡರಲ್‌ ಟ್ರೇಡ್‌ ಕಮೀಷನ್‌ ಹಾಗೂ ನ್ಯೂಯಾರ್ಕ್‌ ಸ್ಟೇಟ್‌ ಅಟಾರ್ನಿ ಜನರಲ್‌, ಗೂಗಲ್‌ಗೆ ಸೂಚಿಸಿದ್ದಾರೆ. ಇದು, ಅಮೆರಿಕದಲ್ಲಿ ಜಾರಿಯಲ್ಲಿರುವ ಮಕ್ಕಳ ಆನ್‌ಲೈನ್‌ ಖಾಸಗಿತನದ ಸಂರಕ್ಷಣಾ ಕಾಯ್ದೆಯಡಿ ಈವರೆಗೆ ಇತ್ಯರ್ಥಗೊಂಡ ಪ್ರಕರಣಗಳಲ್ಲೇ ಅತಿ ದೊಡ್ಡ ಮೊತ್ತದ ದಂಡ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next