ಲಂಡನ್: ವಿಶ್ವಕಪ್ ಕ್ರಿಕೆಟ್ ಜೋರಾಗಿ ನಡೆಯುತ್ತಿದೆ. ಅದರ ಮಧ್ಯೆ ಸದ್ದಿಲ್ಲದೇ ಗೂಗಲ್‌ನಿಂದ ಎಡವಟ್ಟೊಂದು ಸಂಭವಿಸಿದೆ. ಗೂಗಲ್ನ ಹೊಸ ವಿಡಿಯೊ ಕರೆ ಆ್ಯಪ್ ಗೂಗಲ್ ಡ್ಯುಯೊನಿಂದ, ಗೂಗಲ್ ಭಾರತೀಯ ಬಳಕೆದಾರರಿಗೆ ಸಂದೇಶ ಕಳುಹಿಸಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿಯ ಸಂದೇಶ ಅದರಲ್ಲಿತ್ತು.
ಗ್ರಹಚಾರಕ್ಕೆ ಅದು ಭಾರತೀಯ ಬಳಕೆದಾರರ ಜೊತೆಗೆ ವಿಶ್ವದ ಬೇರೆ ದೇಶಗಳ ಬಳಕೆದಾರರಿಗೂ ತಲುಪಿದೆ. ಮಧ್ಯರಾತ್ರಿಯ ಹೊತ್ತಿಗೆ ದಿಢೀರನೆ ಡ್ಯುಯೊ ಮೂಲಕ ಅನಾಮಿಕ ಕರೆ ಬಂದಿದ್ದನ್ನು ನೋಡಿ, ಹಲವರು ಬೆಚ್ಚಿಬಿದ್ದಿದ್ದಾರೆ. ಕೆಲವರು ಸಿಟ್ಟಾಗಿದ್ದಾರೆ.
Advertisement
ಮರುದಿನ ಟ್ವೀಟರ್, ರೆಡ್ಡಿಟ್‌ನಲ್ಲಿ ಜಪಾನ್, ಮೆಕ್ಸಿಕೊ, ಕೆನಡಾ, ಅಮೆರಿಕ, ನ್ಯೂಜಿಲೆಂಡ್‌ನ ಜನ ಗೂಗಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅನಾಹುತವನ್ನು ಅರಿತ ಗೂಗಲ್, ತಕ್ಷಣ ಕ್ಷಮೆಯಾಚಿಸಿದೆ.