Advertisement

ಖ್ಯಾತ ಚಿತ್ರ ನಿರ್ಮಾಪಕ ಶಾಂತರಾಮ್ ಗೆ ಗೂಗಲ್ ಡೂಡಲ್ ಗೌರವ

11:47 AM Nov 18, 2017 | Team Udayavani |

ನವದೆಹಲಿ: ಭಾರತೀಯ ಚಿತ್ರರಂಗದ ಹಿರಿಯ ಚಿತ್ರ ನಿರ್ಮಾಪಕ ನಿರ್ದೇಶಕ, ನಿರ್ಮಾಪಕ ವಿ.ಶಾಂತರಾಮ್ ಅವರ 116ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

Advertisement

ಭಾರತೀಯ ಸಿನಿಮಾ ಜಗತ್ತಿನ ಮಹಾನ್ ಗಣ್ಯರಲ್ಲೊಬ್ಬರಾದ ಶಾಂತರಾಮ್ ಅವರು ಯಶಸ್ವಿ ನಿರ್ದೇಶಕರಾಗಿ, ನಟರಾಗಿ ಹಾಗೂ ನಿರ್ಮಾಪಕರಾಗಿ ಹೆಸರಾದವರು. ಅಲ್ಲದೇ ಭಾರತೀಯ ಸಿನಿಮಾಕ್ಕೆ ಧ್ವನಿ ಮತ್ತು ಬಣ್ಣವನ್ನು ಪರಿಚಯಿಸಿದವರೇ ವಿ.ಶಾಂತರಾಮ್ ಎಂಬುದು ಗಮನಾರ್ಹ.

1091 ನವೆಂಬರ್ 18ರಂದು ಮಹಾರಾಷ್ಟ್ರದಲ್ಲಿ ಜನಿಸಿದ್ದರು. ಶಾಂತರಾಮ್ ಅವರು ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಮಹಾರಾಷ್ಟ್ರ ಫಿಲ್ಮ್ ಕಂಪನಿಗೆ ಸೇರ್ಪಡೆಗೊಂಡಿದ್ದರು. 1929ರಲ್ಲಿ ಬಿಡುಗಡೆಗೊಂಡ ಗೋಪಾಲಕೃಷ್ಣ ಚಿತ್ರ ಭಾರೀ ಯಶಸ್ವಿಯಾಗಿತ್ತು. 1930ರ ಹೊತ್ತಿಗೆ ಸಿಮಿಮಾದಲ್ಲಿ ಧ್ವನಿಯನ್ನು ಅಳವಡಿಸಿದವರು ಶಾಂತರಾಮ್. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ದ್ವಿಭಾಷಾ ಸಿನಿಮಾವನ್ನು ನಿರ್ಮಿಸಿದ್ದರು, ಆ ಸಿನಿಮಾದ ಹೆಸರು ಅಯೋಧ್ಯೆಚಾ ರಾಜಾ(ಮರಾಠಿ) ಹಿಂದಿಯಲ್ಲಿ ಅಯೋಧ್ಯಾ ಕಾ ರಾಜಾ.

1951ರಲ್ಲಿ ಬಿಡುಗಡೆಯಾದ ಅಮರ್ ಭೂಪಾಲಿ, ಝನಕ್, ಝನಕ್ ಪಾಯಲ್ ಬಾಜೆ(1955), ದೋ ಆಂಖೇನ್ ಬಾರಾ ಹಾಥ್ ಸೇರಿದಂತೆ ಹಲವು ಅದ್ಭುತ ಚಿತ್ರಗಳು ಶಾಂತರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದವು. 1986ರಲ್ಲಿ ಜೀವಮಾನ ಸಾಧನೆಗಾಗಿ ಶಾಂತರಾಮ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next