ನವದೆಹಲಿ: ಕೋವಿಡ್-19 ವೈರಸ್ ಜಾಗತಿಕವಾಗಿ ಕ್ಷಿಪ್ರವಾಗಿ ಹರಡುತ್ತಿದ್ದು, ವಿಶ್ವಾದ್ಯಂತ ಜನರ ಮೇಲೆ ಭೀಕರ ಪರಿಣಾಮ ಬೀರತೊಡಗಿದೆ. ಏತನ್ಮಧ್ಯೆ ಗೂಗಲ್ ಹ್ಯಾಂಡ್ ವಾಶ್ ಕಂಡುಹಿಡಿದ ವೈದ್ಯ ಇಗ್ನಾಝ್ ಸೆಮ್ಮೆಲ್ ವೇಯಿಸ್ ಅವರನ್ನು ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಡಾಕ್ಟರ್ ಇಗ್ನಾಝ್ ಹ್ಯಾಂಡ್ ವಾಶ್ ನ ಅಗತ್ಯತೆ ಬಗ್ಗೆ ಕಂಡು ಹಿಡಿದ ಮೊತ್ತ ಮೊದಲ ವ್ಯಕ್ತಿಯಾಗಿದ್ದಾರೆ. ಕೋವಿಡ್-19 ವೈರಸ್ ಮಹಾಮಾರಿ ಪಸರಿಸುತ್ತಿರುವ ನಿಟ್ಟಿನಲ್ಲಿ ಹ್ಯಾಂಡ್ ವಾಶ್ ಪ್ರಮುಖ ಪಾತ್ರವಹಿಸಿದೆ. ಈ ನಿಟ್ಟಿನಲ್ಲಿ ಇಗ್ನಾಝ್ ಅವರ ಕೊಡುಗೆ ಅಪಾರ ಎಂದು ಗೂಗಲ್ ಶ್ಲಾಘಿಸಿದೆ.
ಯಾರಿವರು ಹ್ಯಾಂಡ್ ವಾಶ್ ಪಿತಾಮಹ:
1818ರ ಜುಲೈ1ರಂದು ಇಗ್ನಾಝ್ ಸೆಮ್ಮೆಲ್ ವೆಯಿಸ್ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಜನಿಸಿದ್ದರು. ವಿಯೆನ್ನಾ ಯೂನಿರ್ವಸಿಟಿಯಲ್ಲಿ ವೈದ್ಯ ಪದವಿ ಪಡೆದಿದ್ದರು. ಹಂಗೇರಿಯನ್ ವೈದ್ಯ ಇಗ್ನಾಝ್ ಅವರನ್ನು 1987ರಲ್ಲಿ ವಿಯೆನ್ನಾದ ಜನರಲ್ ಆಸ್ಪತ್ರೆ (ಹೆರಿಗೆ) ಯ ಚೀಫ್ ರೆಸಿಡೆಂಟ್ ಆಗಿ ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರು ಮುಖ್ಯವಾಗಿ ತಾಯಂದಿರ (ಬಾಣಂತಿ) ಹಾಗೂ ರೋಗಿಗಳ ಶುಶ್ರೂಷೆ ಮಾಡುವ ಮೊದಲು ಕೈಗಳನ್ನು ತೊಳೆದುಕೊಳ್ಳುವುದು ಎಷ್ಟು ಮುಖ್ಯ ಎಂಬ ಬಗ್ಗೆ ವಿವರಿಸಿದ್ದರು ಎಂದು ಲೇಖನ ತಿಳಿಸಿದೆ.