Advertisement

Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್‌ ಡೂಡಲ್‌ ಗೌರವ

04:17 PM May 04, 2024 | Team Udayavani |

ನವದೆಹಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಗೂಗಲ್‌ ಆಕರ್ಷಕವಾದ ಡೂಡಲ್‌ ರಚಿಸುವ ಮೂಲಕ ಗೌರವ ಸಲ್ಲಿಸಿದೆ.

Advertisement

ಇದನ್ನೂ ಓದಿ:Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

ಬೆಂಗಳೂರು ಮೂಲದ ಕಲಾವಿದೆ ದಿವ್ಯಾ ನೇಗಿ ಈ ಡೂಡಲ್‌ ರಚಿಸಿದ್ದು, ಕುಸ್ತಿಪಟು ಬಾನು ಅವರು ಗುಲಾಬಿ, ಚುಕ್ಕೆಗಳ ಉಡುಪಿನಲ್ಲಿ ಕಂಗೊಳಿಸಿದ್ದು, ಕುಸ್ತಿಯ ಭಂಗಿಯಲ್ಲಿ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡಿರುವಂತೆ ಚಿತ್ರಿಸಲಾಗಿದೆ.

1940-1950ರ ದಶಕದಲ್ಲಿ ಕುಸ್ತಿ ಪಂದ್ಯದಲ್ಲಿ ಪುರುಷರೇ ಅಧಿಪತ್ಯ ಸಾಧಿಸಿದ್ದ ಸಂದರ್ಭದಲ್ಲೇ ಹಮೀದಾ ಬಾನು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಈ ನಿಟ್ಟಿನಲ್ಲಿ ಟೆಕ್‌ ದೈತ್ಯ ಗೂಗಲ್‌ ತನ್ನ ಮುಖಪುಟದಲ್ಲಿ ಡೂಡಲ್‌ ಅನ್ನು ಪ್ರಕಟಿಸುವ ಮೂಲಕ ದೇಶದ ಮೊದಲ ಕುಸ್ತಿಪಟು ಬಾನು ಅವರನ್ನು ಸ್ಮರಿಸಿಕೊಂಡಿದೆ.

Advertisement

1954ರ ಈ ದಿನದಂದು ನಡೆದ ಕುಸ್ತಿ ಪಂದ್ಯದಲ್ಲಿ ಹಮೀದಾ ಬಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಾನು ಅವರು ಅಂದು ಕೇವಲ 1ನಿಮಿಷ 34 ಸೆಕೆಂಡುಗಳಲ್ಲಿ ಪ್ರಸಿದ್ಧ ಕುಸ್ತಿಪಟು ಬಾಬಾ ಫೈಲ್ವಾನ್‌ ಅವರನ್ನು ಸೋಲಿಸಿದ್ದರು.

ಉತ್ತರಪ್ರದೇಶದ ಅಲಿಗಢ್‌ ನಲ್ಲಿ ಜನಿಸಿದ್ದ ಹಮೀದಾ ಬಾನು ಕುಟುಂಬ ಕುಸ್ತಿ ಪಂದ್ಯದ ಹಿನ್ನೆಲೆ ಹೊಂದಿತ್ತು. ಬಾಲ್ಯದಿಂದಲೇ ಕುಸ್ತಿ ಬಗ್ಗೆ ಆಸಕ್ತಿ ಹೊಂದಿದ್ದ ಬಾನು ತಮ್ಮ ಜೀವಿತಾವಧಿಯಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿದ್ದರು.

ಆ ಕಾಲದಲ್ಲಿ ಮಹಿಳೆಯರು ಕುಸ್ತಿ ಪಂದ್ಯದಲ್ಲಿ ಭಾಗವಹಿಸುವುದನ್ನು ಬಲವಾಗಿ ವಿರೋಧಿಸಲಾಗುತ್ತಿತ್ತು. ಆದರೆ ಈ ಎಲ್ಲಾ ವಿರೋಧ ಲೆಕ್ಕಿಸದೇ ಬಾನು ಕುಸ್ತಿ ಪಂದ್ಯದಲ್ಲಿ ತೊಡಗಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next