Advertisement

ಕೇಂದ್ರದ ನೂತನ ಐಟಿ ನಿಯಮಗಳು ತನಗೆ ಅನ್ವಯಿಸಲ್ಲ: ಗೂಗಲ್‌

10:53 PM Jun 02, 2021 | Team Udayavani |

ನವದೆಹಲಿ: ಕೇಂದ್ರಸರ್ಕಾರ ರೂಪಿಸಿರುವ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳು ತನಗೆ ಅನ್ವಯವಾಗುವುದಿಲ್ಲ ಎಂದು ಗೂಗಲ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

Advertisement

ನಿಂದನಾತ್ಮಕ ಸಂಗತಿಗಳು ಅಂತರ್ಜಾಲದಲ್ಲಿದ್ದರೆ; ಅದನ್ನು ಅಳಿಸುವ ಸಂಗತಿಯ ಬಗ್ಗೆ ನಡೆದ ವಿಚಾರಣೆ ಹಿನ್ನೆಲೆಯಲ್ಲಿ ಗೂಗಲ್‌ ಮೇಲಿನಂತೆ ಪ್ರತಿಕ್ರಿಯಿಸಿದೆ. ಈ ಬಗ್ಗೆ ಜು.25ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಅಂತರ್ಜಾಲ ಸೇವಾ ಪೂರೈಕೆದಾರರ ಸಂಸ್ಥೆ, ಫೇಸ್‌ಬುಕ್‌ಗೆ ಕೋರ್ಟ್‌ ಆದೇಶಿಸಿದೆ.

ಇತ್ತೀಚೆಗೆ ಮಹಿಳೆಯೊಬ್ಬರು; ತನ್ನ ಚಿತ್ರಗಳನ್ನು ಅಶ್ಲೀಲ ವೆಬ್‌ವೊಂದರಲ್ಲಿ ಪ್ರಕಟಿಸಲಾಗಿದೆ, ನ್ಯಾಯಾಲಯದ ಆದೇಶವಿದ್ದರೂ ಅದನ್ನು ವಿಶ್ವಾದ್ಯಂತ ಅಳಿಸಿಲ್ಲ ಎಂದು ದೂರಿದ್ದರು. ಈ ಸಂಬಂಧ ಹಿಂದೆ ಏಕಸದಸ್ಯಪೀಠ ನೀಡಿದ ತೀರ್ಪಿನಲ್ಲಿ, ಗೂಗಲ್‌ ಆ ಅಶ್ಲೀಲಚಿತ್ರಗಳನ್ನು ಸಿಗದಂತೆ ಮಾಡಬೇಕು ಎನ್ನಲಾಗಿತ್ತು. ಅಷ್ಟು ಮಾತ್ರವಲ್ಲ, ಗೂಗಲನ್ನೂ ಸಾಮಾಜಿಕ ತಾಣವೆಂಬಂತೆ ಪರಿಗಣಿಸಿತ್ತು. ತಾನು ಸಾಮಾಜಿಕ ತಾಣವಲ್ಲ; ತನಗೆ ಕೇಂದ್ರದ ನೂತನ ಐಟಿ ನಿಯಮಗಳು ಅನ್ವಯಿಸುವುದಿಲ್ಲ, ಆದ್ದರಿಂದ ಏಕಸದಸ್ಯಪೀಠ ನೀಡಿರುವ ತೀರ್ಪನ್ನು ರದ್ದು ಮಾಡಬೇಕೆಂದು ಗೂಗಲ್‌ ವಾದಿಸಿದೆ.

ಇದೇ ವೇಳೆ ಕೇಂದ್ರ ನೂತನ ನಿಯಮಗಳಿಗೆ ಸ್ಪಂದಿಸಿರುವ ಟ್ವಿಟರ್‌; ಸಮಸ್ಯೆ ಪರಿಹಾರ ಅಧಿಕಾರಿಯೊಬ್ಬರನ್ನು ನೇಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next