ನವದೆಹಲಿ: ಇನ್ನು ಮುಂದೆ ಆಂಡ್ರಾಯ್ಡ್ ಬಳಕೆದಾರರು ಕೂಡ ಗೂಗಲ್ ಕ್ರೋಮ್‌ನಲ್ಲಿ ಆಗತಾನೇ ಕ್ಲೋಸ್ ಮಾಡಿರುವ ಟ್ಯಾಬ್‌ಗಳ ಗುಂಪನ್ನು ಕೇವಲ ಒಂದೇ ಕ್ಲಿಕ್ ಮೂಲಕ ಮರುಸ್ಥಾಪಿಸಬಹುದು!
ಕ್ಲೋಸ್ ಆದ ಎಲ್ಲ ಟ್ಯಾಬ್‌ಗಳನ್ನೂ ಬಳಕೆದಾರರು ಒಟ್ಟಿಗೇ ರೀಸ್ಟೋರ್ ಮಾಡಲು ಸಾಧ್ಯವಾಗಲಿದೆ.
ಪ್ರಸ್ತುತ, ಇಂಥದ್ದೊಂದು ಅವಕಾಶ ಡೆಸ್ಕ್ಟಾಪ್ ಬ್ರೌಸರ್‌ಗಳಿಗೆ ಸಿಗುತ್ತಿದೆ. ಆದರೆ, ಆಂಡ್ರಾಯ್ಡನಲ್ಲಿ ಟ್ಯಾಬ್‌ಗಳನ್ನು ಮರುಸ್ಥಾಪಿಸಬೇಕೆಂದರೆ ಒಂದಾದ ನಂತರ ಒಂದರಂತೆಯೇ ರೀಸ್ಟೋರ್ ಮಾಡಬೇಕಾಗುತ್ತದೆ. ಎಲ್ಲ ಟ್ಯಾಬ್‌ಗಳನ್ನೂ ಒಟ್ಟಿಗೇ ಮರುಸ್ಥಾಪಿಸಲು ಇಲ್ಲಿ ಸಾಧ್ಯವಾಗುವುದಿಲ್ಲ.
ಹೀಗಾಗಿ, ಈಗ “ಆಂಡ್ರಾಯ್ಡ್ ಟ್ಯಾಬ್ ರೀಸ್ಟೋರ್’ ಎಂಬ ಹೊಸ ಫೀಚರ್ ಅನ್ನು ಗೂಗಲ್ ಕ್ರೋಮ್ ಪರೀಕ್ಷಿಸಲು ಆರಂಭಿಸಿದೆ. ಗೂಗಲ್ ಕ್ರೋಮ್ ಕ್ಯಾನರಿಯಲ್ಲಿ ಸದ್ಯದಲ್ಲೇ ಈ ಫೀಚರ್ ಲಭ್ಯವಾಗಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕ್ರೋಮ್ ಕ್ಯಾನರಿ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.