Advertisement

ಗೂಗಲ್‌ ಕ್ರೋಮ್‌ ಲೇಬಲ್‌

07:40 PM Nov 17, 2019 | Sriram |

ಅಂತರ್ಜಾಲವನ್ನು ಜಾಲಾಡಲು ಬ್ರೌಸರ್‌ಗಳು ಬೇಕೇ ಬೇಕು. “ಗೂಗಲ್‌ನ ಕ್ರೋಮ್‌’ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಬ್ರೌಸರ್‌. ಅತಿ ವೇಗವಾಗಿ ಕಾರ್ಯಾಚರಿಸುತ್ತದೆ ಎನ್ನುವ ಹೆಗ್ಗಳಿಕೆ ಅದರದ್ದು. ಗೂಗಲ್‌ ಈಗ ಕ್ರೋಮ್‌ ಬಳಕೆದಾರರಿಗೆ ಹೊಸದೊಂದು ಫೀಚರ್‌ಅನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದಷ್ಟು ಬೇಗನೆ ಈ ಸವಲತ್ತು ಕ್ರೋಮ್‌ನ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಹೊಸ ಸವಲತ್ತು ಏನೆಂದರೆ- ಅದರ ಸರ್ಚ್‌ ಬಾಕ್ಸ್‌ನಲ್ಲಿ ಯಾವುದೇ ಕೀ ವರ್ಡ್‌ ಟೈಪಿಸಿ ಶೋಧ ನಡೆಸುವಾಗ ಅದಕ್ಕೆ ಸಂಬಂಧಿಸಿದ ಜಾಲತಾಣಗಳ ಪೇಜುಗಟ್ಟಲೆ ಕೊಂಡಿಗಳು ಪರದೆ ಮೇಲೆ ಮೂಡುತ್ತವೆ. ಇನ್ನು ಮುಂದೆ ಈ ಕೊಂಡಿಗಳ ಸನಿಹದಲ್ಲೇ ಆಯಾ ಜಾಲತಾಣಗಳು ಬೇಗನೆ ತೆರೆದುಕೊಳ್ಳುತ್ತವೆಯೋ, ಇಲ್ಲವೇ ತುಂಬಾ ಸಮಯ ತೆಗೆದುಕೊಳ್ಳುವುದೋ ಎಂಬ ಮಾಹಿತಿಯೂ ದೊರೆಯಲಿದೆ. ವೇಗ ಮತ್ತು ನಿಧಾನ ಎನ್ನುವುದನ್ನು ಸೂಚಿಸುವ ಸಲುವಾಗಿ ಎರಡು ರೀತಿಯ ಬ್ಯಾಡ್ಜ್ಗಳನ್ನು ರೂಪಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಪುಸ್ತಕಕ್ಕೆ ಲೇಬಲ್‌ ಹಚ್ಚಿದ ಹಾಗೆ. ಲೇಬಲ್‌ ನೋಡುತ್ತಲೇ ಅದು ಯಾವ ಪುಸ್ತಕ, ಯಾರದು ಮುಂತಾದ ಮಾಹಿತಿ ದೊರೆಯುವ ಹಾಗೆಯೇ, ಬ್ಯಾಡ್ಜ್ ನೋಡುತ್ತಲೇ ಜಾಲತಾಣ ವೇಗವಾಗಿ ತೆರೆದುಕೊಳ್ಳುವುದೋ, ನಿಧಾನವಾಗಿ ತೆರೆದುಕೊಳ್ಳುವುದೋ ಎನ್ನುವುದನ್ನು ತಿಳಿಯಬಹುದು.

Advertisement

ಜಾಲತಾಣಗಳು ಬಳಕೆದಾರನ ಎದುರು ತೆರೆದುಕೊಳ್ಳಲು ಈ ಹಿಂದೆ ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಎಂಬುದನ್ನು ಪತ್ತೆ ಹಚ್ಚಿ ಆ ಮಾಹಿತಿಯ ಸಹಾಯದಿಂದ ಬ್ಯಾಡ್ಜ್ಅನ್ನು ದಯಪಾಲಿಸಲಾಗುವುದು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗೂಗಲ್‌, ಬಳಕೆದಾರ ಯಾವ ಉಪಕರಣದಿಂದ ಅಂತರ್ಜಾಲವನ್ನು ಶೋಧಿಸುತ್ತಿದ್ದಾನೋ ಆ ಉಪಕರಣದ ಹಾರ್ಡ್‌ವೇರ್‌, ಮೆಮೋರಿ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚಿ, ಆ ವಿವರಗಳನ್ನು ಆಧರಿಸಿಯೂ ಬ್ಯಾಡ್ಜ್ ನೀಡಲಾಗುವುದು. ಇಂಟರ್ನೆಟ್‌ ಬಳಕೆಯ ಅನುಭವವನ್ನು ಸುಸೂತ್ರವಾಗಿಸುವುದು ಈ ಹೊಸ ಸವಲತ್ತಿನ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next