ಚೆನ್ನೈ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರ ಚೆನ್ನೈ ನಲ್ಲಿ ಪೂರ್ವಿಕರು ಕಟ್ಟಿದ ಮನೆಯನ್ನು ಮಾರಾಟ ಮಾಡಿದ್ದಾರಂತೆ ಅಲ್ಲದೆ ಈ ಮನೆಯನ್ನು ಖರೀದಿ ಮಾಡಿರುವುದು ತಮಿಳು ನಟ ಮತ್ತು ನಿರ್ದೇಶಕ ಸಿ. ಮಣಿಕಂದನ್ ಅವರು, ಎಷ್ಟು ಮೊತ್ತಕ್ಕೆ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.
ಸ್ಟೆನೋಗ್ರಾಫರ್ ಲಕ್ಷ್ಮಿ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ರಘುನಾಥ್ ಪಿಚೈ ದಂಪತಿಗೆ ಜನಿಸಿದ್ದ ಸುಂದರ್ ಪಿಚೈ ಈ ಮನೆಯಲ್ಲಿಯೇ ತಮ್ಮ ಬಾಲ್ಯದಿಂದ ಯೌವನದವರೆಗೆ ಅಂದರೆ ಸುಮಾರು 20 ವರ್ಷದವರೆಗೂ ಇದೇ ಮನೆಯಲ್ಲಿಯೇ ಕಾಲ ಕಳೆದಿದ್ದರಂತೆ.
ಪಿಚೈ ಅವರು ಅಮೆರಿಕದಲ್ಲಿ ಅರಮನೆಯಂಥ ಬಂಗಲೆಯನ್ನು ಹೊಂದಿದ್ದಾರೆ. ಆದರೆ, ಅವರು ಹುಟ್ಟಿ ಬೆಳೆದದ್ದು ಚೆನ್ನೈನ ಅಶೋಕ್ ನಗರ್ನಲ್ಲಿ ಇತ್ತೀಚಿನ ದಿನಗಳಲ್ಲಿ ಅವರು ಹೆತ್ತವರ ಜೊತೆ ಅಮೆರಿಕದಲ್ಲೇ ನೆಲೆಸಿದ್ದರು ಕಳೆದ 2021ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಚೆನ್ನೈಗೆ ಬಂದಿದ್ದರು. ಹಾಗಾಗಿ ತಂದೆ ಈ ಮನೆಯನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ, ಪಿಚೈ ಅವರು ಚೆನ್ನೈ ಯಲ್ಲಿರುವ ಮನೆ ಮಾರುತ್ತಾರೆ ಎಂಬ ವಿಚಾರ ಗೊತ್ತಾದ ತಮಿಳು ನಟ, ನಿರ್ಮಾಪಕ ಸಿ. ಮಣಿಕಂದನ್ ಅವರು ತಾನೇ ಈ ಮನೆಯನ್ನು ಖರೀದಿಸಬೇಕೆಂದು ಆಲೋಚನೆ ಮಾಡಿ ಮಾತುಕತೆ ನಡೆಸಿದ್ದಾರೆ ಅದರಂತೆ ಮನೆಯ ಮಾರಾಟ ಪ್ರಕ್ರಿಯೆ ಎಲ್ಲವು ನಡೆದವು.
ಕಣ್ಣೀರಿಟ್ಟ ಸುಂದರ್ ಪಿಚೈ ತಂದೆ:
ಪೋಷಕರು ತಾವು ಕಷ್ಟಪಟ್ಟು ನಿರ್ಮಿಸಿದ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡುವಾಗ ಕಣ್ಣಲ್ಲಿ ನೀರು ಬರುವುದು ಸಹಜ ಅದರಂತೆ ಮನೆ ಮಾರಾಟ ಪ್ರಕ್ರಿಯೆ ಎಲ್ಲವು ನಡೆದ ಬಳಿಕ ಇನ್ನೇನು ಮನೆಯ ಪತ್ರ ಮಣಿಕಂದನ್ ಅವರ ಕೈಗೆ ನೀಡಬೇಕೆನ್ನುವ ಸಮಯ ತಾವು ಹುಟ್ಟಿ ಬೆಳೆದ ಮನೆಯನ್ನು ಬೇರೆಯವರ ಮಡಿಲಿಗೆ ನೀಡುವ ಸಮಯ ಹತ್ತಿರ ಬಂದಾಗ ಸುಂದರ್ ಪಿಚೈ ಅವರ ತಂದೆ ರಘುನಾಥ್ ಪಿಚೈ ಅವರ ಕಣ್ಣಂಚಿನಲ್ಲಿ ನೀರು ಜಿನುಗಿದೆ.
ಇದನ್ನೂ ಓದಿ: ಅಪಹರಣದ ನಾಟಕವಾಡಿ ಪೋಷಕರ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟ ಮಗಳು… ಬಳಿಕ ಆದದ್ದೇ ಬೇರೆ