ಇಂದು ತಂತ್ರಜ್ಞಾನ ಎಂಬುದು ಜಗತ್ತಿನಾದ್ಯಂತ ಆವರಿಸಿಕೊಂಡಿದೆ. ಫೇಸ್ ಬುಕ್, ಯೂಟ್ಯೂಬ್, ಇನ್ ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಕ್ರಿಯರಾಗಿರುವುದನ್ನು ಗಮನಿಸಿದರೆ ಇಂಟರ್ನೆಟ್, ಸ್ಮಾರ್ಟ್ ಫೋನ್ ಗಳಿಲ್ಲದೆ ಜೀವನ ನಶ್ವರ ಎಂಬ ಭಾವನೆ ಬರುವುದು ಸುಳ್ಳಲ್ಲ. ಆದರೇ ವ್ಯಥಾ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡದೇ ಅದನ್ನೇ ಹಣ ಗಳಿಕೆಯ ಮಾರ್ಗವನ್ನಾಗಿ ಮಾಡಿಕೊಂಡರೇ ಹೇಗೆ ? ಅದಕ್ಕಿರುವ ಉಪಾಯಗಳು ಯಾವುವು ? ಎಂಬುದನ್ನು ಆಲೋಚಿಸಿದರೇ ಹಲವಾರು ದಾರಿಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ.
ಹೌದು, ತಂತ್ರಜ್ಞಾನವನ್ನಿಟ್ಟುಕೊಂಡು ಕುಳಿತಲ್ಲೇ ಹಣ ಸಂಪಾದಿಸಬಹುದು. ಇಂದು ಜಗತ್ತಿನಾದ್ಯಂತ ಯಾವುದೇ ಮಾಹಿತಿ ಬೇಕಾದರೇ ತಕ್ಷಣ ಗೂಗಲ್ ಸರ್ಚ್ ಮಾಡುತ್ತೇವೆ. ಇದೇ ಸರ್ಚ್ ಇಂಜಿನ್ ನಿಮಗೆ ಹಣ ಗಳಿಸುವ ದಾರಿಯನ್ನು ಕೂಡ ತೋರಿಸುತ್ತದೆ. ಇದಕ್ಕೆ ನಮ್ಮಲ್ಲಿರುವ ವಿನೂತನ ಆಲೋಚನೆ, ಕಾರ್ಯಕ್ಷಮತೆ ಬಹಳ ನೆರವಿಗೆ ಬರುತ್ತದೆ.
ಮೊದಲಿಗೆ ಗೂಗಲ್ ಆ್ಯಡ್ ಸೆನ್ಸ್ (Google Ad sense) ಬಗ್ಗೆ ತಿಳಿದುಕೊಳ್ಳೋಣ. ಇದು ಗೂಗಲ್ ಸಂಸ್ಥೆಯ ಆನ್ ಲೈನ್ ಜಾಹೀರಾತು ನೆಟ್ ವರ್ಕ್. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ಹಣ ಸಂಪಾದನೆ ಮಾಡಲು ಅತೀ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಪ್ರೋಗ್ರಾಮ್ ಮೂಲಕ ಪಬ್ಲಿಷರ್ ( ನಿಮ್ಮ) ವೆಬ್ ಸೈಟ್ ಗಳಲ್ಲಿ ಜಾಹೀರಾತುಗಳು ಪ್ರಕಟವಾಗುತ್ತದೆ. ಇದರಿಂದ ನೀವು ಹಣಗಳಿಸಲು ಅವಕಾಶ ಸೃಷ್ಟಿಯಾಗುತ್ತದೆ.
ಗೂಗಲ್ ಎಂಬುದು ಜಗತ್ತಿನಾದ್ಯಂತ ಇರುವ ಪ್ರಸಿದ್ದ ಸರ್ಚ್ ಇಂಜಿನ್. ಮಾತ್ರವಲ್ಲದೆ ಜಿಮೇಲ್, ಯೂಟ್ಯೂಬ್, ಮ್ಯಾಪ್ಸ್ , ಡ್ರೈವ್ಸ್ ಸೇರಿದಂತೆ ಹಲವಾರು ಸೇವೆಗಳು ಇದರಿಂದ ದೊರಕುತ್ತವೆ. ಹಾಗಾಗಿ ಹೆಚ್ಚು ಹೆಚ್ಚು ಜನರು ಬಳಸುತ್ತಾರೆ ಕೂಡ. ಇದನ್ನೇ ತಮ್ಮ ಬ್ರ್ಯಾಂಡ್ ಗಳನ್ನು, ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಹಲವಾರು ಕಂಪೆನಿಗಳು ಮುಂದಾಗುತ್ತವೆ. ಈ ಕಾರಣಕ್ಕಾಗಿಯೇ ಗೂಗಲ್ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಲವು ಜಾಹೀರಾತುದಾರರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಕೆಲಸವನ್ನು ಈ ಆ್ಯಡ್ ಸೆನ್ಸ್ ಮಾಡುತ್ತದೆ.
ಆ್ಯಡ್ ಸೆನ್ಸ್ ಎಂಬ ಫೀಚರ್ ಅನ್ನು ವೆಬ್ ಸೈಟ್, ಯೂಟ್ಯೂಬ್, ಬ್ಲಾಗ್ಸ್, ಸರ್ಚ್ ಇಂಜಿನ್ ಗಳಲ್ಲಿ ಬಳಸಲು ಸಾಧ್ಯವಿದೆ. ಗೂಗಲ್ ಆ್ಯಡ್ ಸೆನ್ಸ್ CPC (Cost Per click) ಆಧಾರಿತ ಪಬ್ಲಿಷರ್ ನೆಟ್ ವರ್ಕ್. ನಿಮ್ಮ ವೆಬ್ ಪೇಜ್ ಮೇಲೆ ಕಾಣಿಸಿಕೊಳ್ಳುವ ಜಾಹೀರಾತು ಮೇಲೆ ಎಷ್ಟು ಕ್ಲಿಕ್ ಆಗಿವೆ ಎಂಬುದರ ಮೇಲೆ ಆ್ಯಡ್ ಸೆನ್ಸ್ ಹಣ ದೊರೆಯುವಂತೆ ಮಾಡುತ್ತದೆ. ಗೂಗಲ್ ಸಿಪಿಸಿ ರೇಟ್ ವೆಬ್ ಸೈಟ್ ನಿಂದ ವೆಬ್ ಸೈಟಿಗೆ ಭಿನ್ನವಾಗಿರುತ್ತದೆ. ಈ ಕಾರಣಕ್ಕಾಗಿಯೇ ಬಹುತೇಕ ಎಲ್ಲಾ ವೆಬ್ ಸೈಟ್ ಗಳು, ಯೂಟ್ಯೂಬ್ ಚಾನೆಲ್ ಗಳು ಆ್ಯಡ್ ಸೆನ್ಸ್ ಬಳಸುತ್ತಾರೆ.
ಗೂಗಲ್ ಆ್ಯಡ್ ಸೆನ್ಸ್ ಅಳವಡಿಸಿಕೊಳ್ಳುವ ವಿಧಾನ: www.google.com/adsense/start ಲಿಂಕ್ ನಲ್ಲಿ ನಿಮ್ಮ ವೆಬ್ ಸೈಟ್ ಅಥವಾ ಯೂಟ್ಯೂಬ್ URL ಸೇರಿಸಿ. ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ನಮೂದಿಸಿ. ತದನಂತರದಲ್ಲಿ ಗೂಗಲ್ ಸಂಸ್ಥೆ ಅಪ್ರೂವ್ ಮಾಡಿದರೆ ನಿಮಗೆ ಹಣ ದೊರಕುತ್ತದೆ. ಆದರೇ ನೆನಪಿಡಬೇಕಾದ ಸಂಗತಿ ಎಂದರೇ ವೆಬ್ ಸೈಟ್ ಗಳಿಗೆ ಪೇಜ್ ವ್ಯೂಸ್ ನಿರಂತರವಾಗಿ ಹೆಚ್ಚಾಗುತ್ತಿರಬೇಕು. ಹಾಗೂ ಯೂಟ್ಯೂಬ್ ನಲ್ಲಿ Subscribers ಹೆಚ್ಚಿರಬೇಕು.
ಗೂಗಲ್ ಆ್ಯಡ್ ಸೆನ್ಸ್ ಗೆ ಪರ್ಯಾಯವಾಗಿ ಸಾಕಷ್ಟು ಆಯ್ಕೆಗಳು ಇವೆ. ಇವುಗಳು ಕೂಡ ಜಾಹೀರಾತು ಮೂಲಗಳಾಗಿವೆ.
ಆ್ಯಡ್ ಝೀಬ್ರಾ: ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಪಡೆಯಲು ಇದು ಸೂಕ್ತ. ಇಲ್ಲಿ ಜಾಹೀರಾತುಗಳು ಲೇಖನದ ರೂಪದಲ್ಲಿರುತ್ತದೆ. ಅಂದರೇ ಆಹಾರವನ್ನು ಸೇವಿಸಿ ಈಕೆ ಒಂದು ವಾರದಲ್ಲಿ 10 ಕೆಜಿ ತೂಕ ಕಳೆದುಕೊಂಡಿದ್ದಾಳೆ. ಅಥವಾ ಬಕ್ಕ ತಲೆಗೆ ಕೂದಲು ಬೆಳೆಸಲು ವಿಶೇಷ ಔಷಧ ಇತ್ಯಾದಿ.
ಕೊಲಂಬಿಯಾ ಅನ್ ಲೈನ್ : ಇದು ಟೈಮ್ಸ್ ನೆಟ್ ವರ್ಕ್ ವೆಬ್ ಸೈಟ್ . ಇದು ಸಹ ಲೇಖನ ರೂಪದಲ್ಲಿರುವ ಜಾಹೀರಾತುಗಳು. ನಿಮ್ಮ ವೆಬ್ ಸೈಟ್ ಗೆ ಅತ್ಯುತ್ತಮ ಪೇಜ್ ವ್ಯೂಸ್ ಇದ್ದರೆ ಕೊಲಂಬಿಯ ಆನ್ ಲೈನ್ ಜಾಹೀರಾತು ಪ್ರಯತ್ನಿಸಬಹುದು.
ದೇಶಿಪರ್ಲ್: ಇದು ಕೂಡ ಕಂಟೆಂಟ್ ಮಾರ್ಕೆಟಿಂಗ್ ತಂತ್ರವನ್ನು ಬಳಸುತ್ತದೆ. ಇಲ್ಲೂ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಇತರ ಭಾಷೆಗಳ ಲೇಖನ ಲಿಂಕ್ ಗಳ ರೂಪದಲ್ಲಿ ಜಾಹೀರಾತುಗಳು ಕಾಣಿಸುತ್ತದೆ. ಮುಖ್ಯವಾಗಿ ಬಡಮಕ್ಕಳಿಗೆ ಸಹಾಯ ಮಾಡಿ ಇತ್ಯಾದಿ ಜಾಹೀರಾತುಗಳು ಹೆಚ್ಚಿರುರುತ್ತದೆ.
ಮೀಡಿಯಾ.ನೆಟ್ : ನಿಮ್ಮ ವೆಬ್ ಸೈಟ್ ಗಳಿಗೆ ಕನಿಷ್ಟ ತಿಂಗಳಿಗೆ 10 ಲಕ್ಷ ಪೇಜ್ ವ್ಯೂಸ್ ಇದ್ದರೆ ಮಿಡಿಯಾ. ನೆಟ್ ಎಂಬ ಆನ್ ಲೈನ್ ಜಾಹೀರಾತು ಸೇವೆಗೆ ನೋಂದಣಿ ಮಾಡಬಹುದು.
ಅಫಿಲಿಯೇಟ್ ಎಂಬ ಜಾಹೀರಾತುಮೂಲಗಳು: ಕನ್ನಡದ ವೆಬ್ ಸೈಟ್ ಗಳಿಗೂ ಅಫಿಲಿಯೇಟ್ ಜಾಹೀರಾತುಗಳು ಅತ್ಯುತ್ತಮ ಆದಾಯದ ಮೂಲಗಳಾಗಬಹುದು.
ಉದಾ: ನೀವು ಅಮೇಜಾನ್ ವೆಬ್ ಸೈಟ್ ನ ಅಫಿಲಿಯೇಟ್ ವಿಭಾಗಕ್ಕೆ ಹೋಗಿ ನೋಂದಾಯಿಸಿಕೋಂಡರೆ ಅಮೇಜಾನ್ ನಲ್ಲಿರುವ ಉತ್ಪನ್ನಗಳ ಲಿಂಕ್ ಕೋಡ್ ಪಡೆದು ನಿಮ್ಮ ವೆಬ್ ಸೈಟ್ ನಲ್ಲಿ ಪ್ರದರ್ಶಿಸಬಹುದು.
-ಸಂಗ್ರಹ