Advertisement

ಕಂಪ್ಯೂಟರ್‌ನಲ್ಲಿ ಸೂಪರ್‌ ಸಾಧನೆ : ಕ್ವಾಂಟಮ್‌ ಸುಪ್ರಿಮಸಿ ಅಭಿವೃದ್ಧಿಪಡಿಸಿದ ಗೂಗಲ್‌

09:51 AM Oct 25, 2019 | Hari Prasad |

ಪ್ಯಾರಿಸ್‌: ಸಾಮಾನ್ಯ ಕಂಪ್ಯೂಟರುಗಳು 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುವ ಒಂದು ಪ್ರಮೇಯವನ್ನು ಕೇವಲ 200 ಸೆಕೆಂಡುಗಳಲ್ಲಿ ಮುಗಿಸುವ ಕ್ವಾಂಟಮ್‌ ಸುಪ್ರಿಮಸಿ ಎಂಬ ಸೂಪರ್‌ ಕಂಪ್ಯೂಟರ್‌ ಅನ್ನು ಗೂಗಲ್‌ ರೂಪಿಸಿದೆ. ಆದರೆ ಈ ಕಂಪ್ಯೂಟರ್‌ ಕೇವಲ 2000 ನೇ ಇಸ್ವಿಯಲ್ಲಿ ಚಾಲ್ತಿಯಲ್ಲಿದ್ದ ಫ್ಲಿಪ್‌ ಫೋನ್‌ ರೀತಿ ಕಾಣಿಸುತ್ತದೆ. ಸಾಮಾನ್ಯ ಕಂಪ್ಯೂಟರುಗಳು 1 ಅಥವಾ 0 ಹೊಂದಿರುವ ಬಿಟ್‌ಗಳ ಮೂಲಕ ಕೆಲಸ ಮಾಡುತ್ತವೆ. ಆದರೆ ಕ್ವಾಂಟಮ್‌ ಕಂಪ್ಯೂಟರುಗಳು 1 ಮತ್ತು 0 ಎರಡನ್ನೂ ಒಂದೇ ಬಾರಿಗೆ ನಿರ್ವಹಿಸುತ್ತವೆ. ಇದರಿಂದ ಅತ್ಯಂತ ವೇಗದಲ್ಲಿ ಕಂಪ್ಯೂಟರ್‌ ಕೆಲಸ ಮಾಡಲು ಸಾಧ್ಯವಾಗುತ್ತದೆ.

Advertisement

ಈ ಸೂಪರ್‌ ಕಂಪ್ಯೂಟರ್‌ಗಾಗಿ ಸೈಕಾಮೋರ್‌ ಎಂಬ 54 ಕ್ಯೂಬಿಟ್‌ ಪ್ರೊಸೆಸರ್‌ ಅನ್ನು ಗೂಗಲ್‌ ಅಭಿವೃದ್ಧಿಪಡಿಸಿದೆ. ಸೂಪರ್‌ ಕಂಪ್ಯೂಟರ್‌ ವಲಯದಲ್ಲಿ ಇದೊಂದು ಮಹತ್ವದ ಸಾಧನೆ ಎಂದು ಮೆಸಾಚುಸೆಟ್ಸ್‌ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್‌ ಸಂಶೋಧಕ ವಿಲಿಯಮ್‌ ಒಲಿವರ್‌ ಹೇಳಿದ್ದಾರೆ.

ಇದೇ ವೇಳೆ, ಈ ತಂಡದ ಸಾದನೆಯನ್ನು ಗೂಗಲ್‌ ಸಿಇಒ ಸುಂದರ್‌ ಪಿಚೈ ಕೂಡ ಟ್ವೀಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಕ್ವಾಂಟಮ್‌ ಸುಪ್ರಿಮಸಿಯನ್ನು ಮಶಿನ್‌ ಲರ್ನಿಂಗ್‌, ಕ್ವಾಂಟಮ್‌ ಕೆಮಿಸ್ಟ್ರಿ ಹಾಗೂ ಇತರ ತಂತ್ರಜ್ಞಾನಗಳಿಗೆ ಬಳಸಿಕೊಳ್ಳಲು ಗೂಗಲ್‌ ಸಂಶೋಧಕರು ಯತ್ನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಕ್ವಾಂಟಮ್‌ ಪ್ರೊಸೆಸರ್‌ಗಳನ್ನು ಇತರ ಸಂಶೋಧಕರು ಹಾಗೂ ಸಂಸ್ಥೆಗಳಿಗೆ ಒದಗಿಸಲಿದ್ದು, ಅವು ಈ ಸೌಲಭ್ಯ ಬಳಸಿಕೊಂಡು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಬಹುದು. ಎನ್‌ಕ್ರಿಪ್ಷನ್‌ ಸಾಫ್ಟ್ವೇರ್‌ ಮತ್ತು ಕೃತಕ ಬುದ್ಧಿಮತ್ತೆ ಈ ಇದನ್ನು ಬಳಸಿಕೊಳ್ಳಬಹುದು.

ಈ ಮಧ್ಯೆಯೇ ಉತ್ತಮ ಹಾರ್ಡ್‌ವೇರ್‌ ಮತ್ತು ಸುಧಾರಿತ ತಾಂತ್ರಿಕತೆ ಬಳಸಿಕೊಂಡರೆ ಈ ಕ್ವಾಂಟಮ್‌ ಸುಪ್ರಿಮಸಿಯು ಇನ್ನಷ್ಟು ವೇಗವಾಗಿರಲಿದೆ ಎಂದು ಗೂಗಲ್‌ ವಿಜ್ಞಾನಿಗಳೇ ಹೇಳಿದ್ದಾರೆ. ಇದೇ ವೇಳೆ, ಕಳೆದ ತಿಂಗಳು ಈ ಕುರಿತ ವರದಿ ಸೋರಿಕೆಯಾದಾಗ ಸಾಫ್ಟ್ವೇರ್‌ ಕಂಪೆನಿ ಐಬಿಎಂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next