Advertisement

ಒಡಿಶಾದಲ್ಲಿ ಮತ್ತೊಂದು ದುರಂತ: ಬರ್ಗಢ್ ನಲ್ಲಿ ಹಳಿ ತಪ್ಪಿದ ರೈಲು

11:39 AM Jun 05, 2023 | Team Udayavani |

ಹೊಸದಿಲ್ಲಿ: ಒಡಿಶಾದ ಬಾಲಸೋರ್‌ನಲ್ಲಿ 275 ಜನರ ಸಾವಿಗೆ ಕಾರಣವಾದ ಭೀಕರ ರೈಲು ಅಪಘಾತದ ಮೂರು ದಿನಗಳ ನಂತರ, ಸುಣ್ಣದ ಕಲ್ಲುಗಳನ್ನು ಸಾಗಿಸುತ್ತಿದ್ದ ಮತ್ತೊಂದು ರೈಲು ಬರ್ಗಢ್ ಪ್ರದೇಶದಲ್ಲಿ ಹಳಿ ತಪ್ಪಿದೆ.

Advertisement

ಬಾಲಸೋರ್ ಘಟನಾ ಸ್ಥಳದಿಂದ ಸಮಾರು 500 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ಡುಂಗ್ರಿ ಸುಣ್ಣದ ಗಣಿಗಳು ಮತ್ತು ಎಸಿಸಿ ಬರ್ಗಢ್‌ ನ ಸಿಮೆಂಟ್ ಸ್ಥಾವರದ ನಡುವೆ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಿದೆ. ಲೈನ್, ವ್ಯಾಗನ್‌ಗಳು ಮತ್ತು ಲೊಕೊಮೊಟಿವ್ ಎಲ್ಲವೂ ಖಾಸಗಿಯಾಗಿದ್ದು, ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:Ramanagara: ಟೋಲ್ ವಿಚಾರದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ

ಕೆಲವು ಬೋಗಿಗಳು ಮಾತ್ರ ಹಳಿತಪ್ಪಿವೆ ಮತ್ತು ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next