Advertisement
ಸಚಿವ ಪ್ರಮೋದ್ ಮಧ್ವರಾಜ್ ಅವರು ಕೇಂದ್ರ ಸರಕಾರ ನಿರ್ಧಾರ ತಳೆದಾಗಲೇ ಕೆಂಪು ದೀಪವನ್ನು ತೆರವುಗೊಳಿಸಿದ್ದರು. ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರ ಕಾರಿನಲ್ಲಿದ್ದ ಕೆಂಪುದೀಪವನ್ನು ತೆರವು ಗೊಳಿಸಲಾಗಿದೆ. ಸಚಿವ ಬಿ. ರಮಾನಾಥ ರೈ ಅವರು ತಮ್ಮ ಕಾರಿಗೆ ಅಳವಡಿಸಿರುವ ಕೆಂಪು ದೀಪವನ್ನು ಮೆ 1ರಂದು ತೆರವುಗೊಳಿಸಲು ತೀರ್ಮಾನಿಸಿದ್ದಾರೆ.
ಸಚಿವ ಯು.ಟಿ. ಖಾದರ್ ಕಾರಿನ ಕೆಂಪು ದೀಪ ತೆರವುಗೊಳಿಸಿಲ್ಲ. ಈ ಬಗ್ಗೆ ಉದಯವಾಣಿ ಅವರನ್ನು ಸಂಪರ್ಕಿಸಿದಾಗ “ಕಾರು ಸರಕಾರದ್ದು.ನಾವು ಅದರಲ್ಲಿ ಕುಳಿತು ಪ್ರಯಾಣಿಸುವರು. ಕಾರಿನಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ಆಡಳಿತ ಮತ್ತು ಸಿಬಂದಿ ಸುಧಾರಣಾ ಇಲಾಖೆ ತೀರ್ಮಾನಿಸುತ್ತದೆ. ಕೆಂಪು ದೀಪ ತೆರವುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ರಾಜ್ಯ ಸರಕಾರಗಳು ಮೊದಲು ಒಪ್ಪಬೇಕು. ಆ ಮೇಲೆ ಕೆಂಪು ದೀಪ ತೆರವುಗೊಳಿಸುವ ಬಗ್ಗೆ ಡಿಪಿಆರ್‌ನಿಂದ ಆದೇಶ ಹೊರಬರಬೇಕಾಗುತ್ತದೆ. ಹೀಗಾಗಿ ಸಚಿವರ ಕಾರಿನಲ್ಲಿ ಅಳವಡಿಸಿರುವ ಕೆಂಪುದೀಪ ತೆರವು ಗೊಳಿಸುವಲ್ಲಿ ನಮ್ಮದೇನೂ ಪಾತ್ರ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
Related Articles
Advertisement