Advertisement

ಅಪಾರ್ಚುನಿಟಿಗೆ ವಿದಾಯ

12:30 AM Feb 15, 2019 | Team Udayavani |

ವಾಷಿಂಗ್ಟನ್‌: ಮಂಗಳನ ಮೇಲ್ಮೆ„ಯನ್ನು ಪರೀಕ್ಷಿಸಲು, ಅಮೆರಿಕದ ನಾಸಾ ಕಳುಹಿಸಿದ್ದ ಅಪಾರ್ಚುನಿಟಿ ರೋವರ್‌ ರೋಬೋ ಯಂತ್ರಕ್ಕೆ ವಿಜ್ಞಾನಿಗಳು ಅಂತಿಮ ವಿದಾಯ ಹೇಳಿದ್ದಾರೆ. ಕೆಲ ತಿಂಗಳುಗಳಿಂದ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಈ ರೋಬೋನ ಪುನಃಶ್ಚೇತನಕ್ಕಾಗಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫ‌ಲವಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬುಧವಾರ (ಫೆ. 13) ಈ ನಿರ್ಧಾರವನ್ನು ನಾಸಾ ಅಧಿಕೃತವಾಗಿ ಪ್ರಕಟಿಸಿದೆ. ಆರಂಭದಲ್ಲಿ 90 ದಿನಗಳ ಅಧ್ಯಯನಕ್ಕಾಗಿ ಕಳುಸಿಹಿದ್ದ ಈ ರೋಬೋ ನಿರೀಕ್ಷೆಗೂ ಮೀರಿ ಕಾರ್ಯಾಚರಣೆ ನಡೆಸಿದ್ದು ಅದೇ ಅದರ ಹೆಗ್ಗಳಿಕೆಯಾಗಿದೆ. 

Advertisement

ವಿಜ್ಞಾನಿಗಳು ಕೈ ಚೆಲ್ಲಿದ್ದೇಕೆ?: ಕಳೆದ ವರ್ಷದ ಮೇ-ಜೂನ್‌ ತಿಂಗಳಲ್ಲಿ ಮಂಗಳದ ಮೇಲ್ಮೆ„ ಎದ್ದಿದ್ದ ಧೂಳು ಮಿಶ್ರಿತ ಭೀಕರ ಬಿರುಗಾಳಿಯಿಂದ ರೋವರ್‌ನ ಕ್ಯಾಮೆರಾ, ಪ್ಯಾನೆಲ್‌ಗ‌ಳು ಹಾಗೂ ಸೆನ್ಸರ್‌ಗಳ ಮೇಲೆ ಅಗಾಧ ಧೂಳು ಮೆತ್ತಿಕೊಂಡಿದ್ದರಿಂದ 2018ರ ಆಗಸ್ಟ್‌ನಿಂದ  ರೋವರ್‌ ಕೆಲಸ ಮಾಡಿರಲಿಲ್ಲ. ರೋವರ್‌ ಪುನಃಶ್ಚೇತನಕ್ಕೆ ಭೂಮಿಯಿಂದ ಕಳುಹಿಸಲಾದ 835 ರಿಕವರಿ ಕಮಾಂಡ್‌ಗಳಿಗೆ ರೋವರ್‌ ಸ್ಪಂದಿಸಲಿಲ್ಲ. ಜತೆಗೆ, ರೋವರ್‌ನ ಕಮಾಂಡ್‌ ಸ್ವೀಕಾರ ವಿಭಾಗವೂ ಕ್ಷೀಣಗೊಂಡಿತ್ತು. 

ಸಂಕ್ಷಿಪ್ತ ಪರಿಚಯ
ಹೆಸರು: ಅಪಾರ್ಚುನಿಟಿ ರೋವರ್‌
ಅಡ್ಡ ಹೆಸರು: ಒಪ್ಪಿ 
ತೂಕ: 185 ಕೆ.ಜಿ.
ಕಾರ್ಯಾಚರಣೆ ಅವಧಿ: 5352  
ಸೋಲಾರ್‌ ದಿನ
ಉಡಾವಣೆ: ಜು. 7, 2003
ಮಂಗಳ ಮುಟ್ಟಿದ್ದು: ಜ. 25, 2004
ಕ್ರಮಿಸಿದ ದೂರ: 45.16 ಕಿ.ಮೀ. 
ಸಂಪರ್ಕ ಕಡಿತ: ಜೂ. 10, 2018
ವಿದಾಯ: ಫೆ. 13, 2019

Advertisement

Udayavani is now on Telegram. Click here to join our channel and stay updated with the latest news.

Next