Advertisement

11 ವರ್ಷ ಸೇವೆ ಸಲ್ಲಿಸಿದ ಬಾಂಬ್‌ ಪತ್ತೆ ಶ್ವಾನಕ್ಕೆ ಭಾವುಕ ವಿದಾಯ

01:16 AM Feb 28, 2021 | Team Udayavani |

ನಾಸಿಕ್‌: ಪೊಲೀಸ್‌ ಜೀಪ್‌ನ ಬ್ಯಾನೆಟ್‌ ಮೇಲೆ ಬಗೆಬಗೆಯ ಹೂವು, ಬಲೂನು… ಅದರ ಮಧ್ಯೆ ತಣ್ಣಗೆ ಮಲಗಿರುವ ಶ್ವಾನ! ಜೀಪ್‌ ನಿಧಾನಕ್ಕೆ ಚಲಿಸುತ್ತಾ ಪರೇಡ್‌ ಮಾಡುತ್ತಿದ್ದರೆ, ಸುತ್ತಲೂ ಇದ್ದ ಪೊಲೀಸರು ಸಲ್ಯೂಟ್‌ ಹೊಡೆದು, ಶ್ವಾನಕ್ಕೆ ಚಪ್ಪಾಳೆ ತಟ್ಟುತ್ತಿದ್ದರು!

Advertisement

ಇದು ನಾಸಿಕ್‌ನ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದಲ್ಲಿ 11 ವರ್ಷ ಪ್ರಶಂಸನೀಯ ಸೇವೆ ಸಲ್ಲಿಸಿದ ಶ್ವಾನಕ್ಕೆ ಪೊಲೀಸರು ನೀಡಿದ ಹೃದಯ ತುಂಬಿದ ಗೌರವ ವಿದಾಯ. ಯಾರ ಕಣ್ಣಲ್ಲೂ ನೀರು ಜಿನುಗಿಸಬಲ್ಲಂಥ ಈ ವೀಡಿಯೋವನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಟ್ವಿಟರಿನಲ್ಲಿ ಪೋಸ್ಟ್‌ ಮಾಡಿದ್ದರು.

“ಇದು ಕೇವಲ ಒಂದು ಶ್ವಾನವಲ್ಲ. ಪೊಲೀಸ್‌ ಕುಟುಂಬದ ಒಬ್ಬ ಪ್ರಮುಖ ಸದಸ್ಯ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಈ ಶ್ವಾನಕ್ಕೆ ನನ್ನ ಹೃತ್ಪೂರ್ವಕ ನಮನಗಳು…’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next